ವಾಷಿಂಗ್ಟನ್: ಅಮೆರಿಕಕ್ಕೆ ಭಾರತದ ರಫ್ತು 2020ರ ಡಿಸೆಂಬರ್‌ನಲ್ಲಿ ಶೇ 14ರಷ್ಟು ಏರಿಕೆಯಾಗಿ 4.89 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.
ಡಿಸೆಂಬರ್ ಸಹ ಸತತ ನಾಲ್ಕನೇ ತಿಂಗಳ ಸಕಾರಾತ್ಮಕ ಬೆಳವಣಿಗೆ ದಾಖಲಿಸಿದ್ದು, ವ್ಯಾಪಾರದಲ್ಲಿ ಬಲವಾದ ಚೇತರಿಕೆಯನ್ನು ಇದು ಸೂಚಿಸುತ್ತದೆ. ಆದರೆ ಭಾರತಕ್ಕೆ ಅಮೆರಿಕದ ರಫ್ತು ಶೇ 7.4ರಷ್ಟು ಇಳಿದಿದ್ದು, 2019ರ ಡಿಸೆಂಬರ್‌ನಲ್ಲಿ 3.01 ಬಿಲಿಯನ್ ಡಾಲರ್‌ನಿಂದ 2.78 ಬಿಲಿಯನ್ ಡಾಲರ್‌ಗೆ ತಲುಪಿದೆ.
ಇದನ್ನೂ ಓದಿ: ಸರಣಿ ಸಮಬಲ: ಮೊದಲ ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಂಡ ಟೀಂ ಇಂಡಿಯಾ
2.1 ಬಿಲಿಯನ್ ಡಾಲರ್ಗಳಷ್ಟು ವ್ಯಾಪಾರ ಕೊರತೆ ಕಂಡು ಬಂದಿದ್ದು, ಇದು ಅಮೆರಿಕ ಪರವಾಗಿ 1.27 ಬಿಲಿಯನ್ ಡಾಲರ್‌ಗಳಿಂದ ಶೇ 65ರಷ್ಟು ಹೆಚ್ಚಾಗಿದೆ ಎಂದು ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಉಭಯ ರಾಷ್ಟ್ರಗಳ ನಡುವಿನ ಒಟ್ಟು ವ್ಯಾಪಾರವು 2019ರಲ್ಲಿ 7.29 ಬಿಲಿಯನ್ ಡಾಲರ್‌ಗಳಿಂದ 2020ರಲ್ಲಿ ಶೇ 5.3ರಷ್ಟು ಏರಿಕೆಯಾಗಿ 7.68 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.
ವರ್ಷಾಂತ್ಯದಲ್ಲಿ ದೃಢವಾದ ಬೆಳವಣಿಗೆಯ ಹೊರತಾಗಿಯೂ 2020ರಲ್ಲಿ (ಜನವರಿಯಿಂದ ಡಿಸೆಂಬರ್‌ವರೆಗೆ) ಅಮೆರಿಕಕ್ಕೆ ಭಾರತದ ರಫ್ತು ಶೇ 11.3ರಷ್ಟು ಇಳಿದು 51.1 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. 2019ರಲ್ಲಿ 57.7 ಬಿಲಿಯನ್ ಡಾಲರ್‌ನಷ್ಟು ಇತ್ತು.
ಭಾರತಕ್ಕೆ ಅಮೆರಿಕ ರಫ್ತು ಹಿಂದಿನ ವರ್ಷದಲ್ಲಿ 34.3 ಬಿಲಿಯನ್ ಡಾಲರ್‌ಗಳಿಂದ 2020ರಲ್ಲಿ ಶೇ 20ರಷ್ಟು ಇಳಿದು 27.4 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. 2020ರ ಒಟ್ಟು ವಹಿವಾಟು ಹಿಂದಿನ ಕ್ಯಾಲೆಂಡರ್ ವರ್ಷದಲ್ಲಿ 91.9 ಬಿಲಿಯನ್ ಡಾಲರ್‌ಗಳಿಂದ ಶೇ 14.6ರಷ್ಟು ಇಳಿದು 78.5 ಬಿಲಿಯನ್ ಡಾಲರ್‌ಗೆ ತಲುಪಿದ್ದು, ಶೇ 1.7ರಷ್ಟು ಕೊರತೆ ಕಂಡು ಬಂದಿದೆ.