ಕರ್ನಾಟಕ

karnataka

ETV Bharat / business

2020ರಲ್ಲಿ ಅಮೆರಿಕ-ಚೀನಾದಿಂದ ಕಡಿಮೆ ಆಮದು: ರಫ್ತು ಪ್ರಮಾಣದಲ್ಲಿ ಗಮನಾರ್ಹ ಏರಿಕೆ - ಅಮೆರಿಕ ಚಿನಾಕ್ಕೆ ಹೆಚ್ಚಾದ ರಫ್ತು

ಕೇಂದ್ರ ಸರ್ಕಾರದ ಮಾಹಿತಿಯ ಪ್ರಕಾರ ಅಮೆರಿಕ ಮತ್ತು ಚೀನಾದಿಂದ ಆಮದು ಪ್ರಮಾಣ ಕಡಿಮೆಯಾಗಿದ್ದು, ರಫ್ತು ಪ್ರಮಾಣದಲ್ಲಿ ಗಮನಾರ್ಹ ಏರಿಕೆ ಕಂಡಿದೆ.

Indian exports to US, China on rise in 2020
ಅಮೆರಿಕ-ಚೀನಾದಿಂದ ಕಡಿಮೆ ಆಮದು

By

Published : Oct 21, 2020, 7:27 AM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕೆಲ ಕ್ರಮಗಳಿಂದ ಈ ವರ್ಷ ಅಮೆರಿಕ ಮತ್ತು ಚೀನಾ ದೇಶಗಳಿಂದ ಆಮದು ಕಡಿಮೆಯಾಗುವುದರೊಂದಿಗೆ ರಫ್ತು ಪ್ರಮಾಣ ಗಮನಾರ್ಹ ಏರಿಕೆ ಕಂಡಿದೆ.

ಕೇಂದ್ರ ಮಾಹಿತಿಯ ಪ್ರಕಾರ, 2020ರ ಸೆಪ್ಟೆಂಬರ್‌ನಲ್ಲಿ ಅಮೆರಿಕಕ್ಕೆ ಭಾರತದ ರಫ್ತು 5.1 ಬಿಲಿಯನ್ ಡಾಲರ್ ಆಗಿದ್ದು, 2019ರಲ್ಲಿ ಇದೇ ತಿಂಗಳು 4.4 ಬಿಲಿಯನ್ ಡಾಲರ್​ನಷ್ಟು ರಫ್ತು ಮಾಡಲಾಗಿತ್ತು. ಈ ಮೂಲಕ ರಫ್ತು ಪ್ರಮಾಣ ಶೇಕಡಾ 15.5ರಷ್ಟು ಹೆಚ್ಚಾಗಿದೆ.

ಇದಲ್ಲದೆ ಅಮೆರಿಕದಿಂದ ಆಮದು ಪ್ರಮಾಣ ಶೇಕಡಾ 34.3 ಇಳಿಕೆ ಕಂಡಿದೆ. 2019ರಲ್ಲಿ 2.8 ಬಿಲಿಯನ್ ಡಾಲರ್​ನಷ್ಟು ಆಮದು ಮಾಡಿಕೊಳ್ಳಲಾಗಿತ್ತು. ಆದರೆ ಈ ವರ್ಷ 1.8 ಬಿಲಿಯನ್ ಡಾಲರ್​ಗೆ ತಲುಪಿದೆ.

ಅದೇ ರೀತಿ ಈ ವರ್ಷ ಏಪ್ರಿಲ್​​ನಿಂದ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಚೀನಾದಿಂದ ಆಮದು ಪ್ರಮಾಣ ಕಡಿಮೆಯಾಗಿದೆ. ಕಳೆದ ವರ್ಷ 36.3 ಬಿಲಿಯನ್ ಡಾಲರ್​ನಷ್ಟು ಆಮದು ಮಾಡಿಕೊಳ್ಳಲಾಗಿತ್ತು. ಆದರೆ ಈ ವರ್ಷ 27.4 ಬಿಲಿಯನ್ ಡಾಲರ್​ಗೆ ಇಳಿದಿದೆ. ಈ ಮೂಲಕ ಆಮದು ಪ್ರಮಾಣ ಶೇಕಡಾ 24.5ರಷ್ಟು ಕಡಿಮೆ ಆಗಿದೆ.

ಚೀನಾಕ್ಕೆ ಭಾರತೀಯ ರಫ್ತು ಪ್ರಮಾಣ ಶೇಕಡಾ 26.3ರಷ್ಟು ಏರಿಕೆಯಾಗಿದ್ದು, 2019ರಲ್ಲಿ 8.4 ಬಿಲಿಯನ್ ಡಾಲರ್​ನಷ್ಟು ರಫ್ತು ಮಾಡಲಾಗಿತ್ತು. ಆದರೆ ಈ ಬಾರಿ 10.6 ಶತಕೋಟಿ ಡಾಲರ್ ತಲುಪಿದೆ ಎಂದು ಕೇಂದ್ರ ಮಾಹಿತಿ ನೀಡಿದೆ.

ABOUT THE AUTHOR

...view details