ನವದೆಹಲಿ:ಭಾರತೀಯ ಬ್ಯಾಂಕಿಂಗ್ ಕ್ಷೇತ್ರವು ಸುರಕ್ಷಿತ ಮತ್ತು ಸುಸ್ಥಿರವಾಗಿ ಮುಂದುವರಿಯುತ್ತಿದೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ದೇಶದ ಬ್ಯಾಂಕಿಂಗ್ ವಲಯ ಸುಸ್ಥಿತಿಯಲ್ಲಿದೆ: ಶಕ್ತಿಕಾಂತ್ ದಾಸ್ - ಆರ್‌ಬಿಐ ಗವರ್ನರ್
ಕೋವಿಡ್-19ನಿಂದ ಉದ್ಭವಿಸಿದ ಆರ್ಥಿಕ ಸಂಕಷ್ಟ ಎದುರಿಸಲು ಆರ್‌ಬಿಐ ತೆಗೆದುಕೊಂಡ ಕ್ರಮಗಳು ಸೂಕ್ತವಾಗಿದೆ ಎಂದು ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
shaktikant-das
ಲಾಕ್‌ಡೌನ್ ಸಂದರ್ಭದಲ್ಲಿ ಸಾಲಗಳ ಮೇಲಿನ ನಿಷೇಧವು ತಾತ್ಕಾಲಿಕ ಪರಿಹಾರವಾಗಿದ್ದರೂ, ಕೋವಿಡ್-19ಗೆ ಸಂಬಂಧಿಸಿದ ಒತ್ತಡವನ್ನು ಎದುರಿಸುತ್ತಿರುವ ಸಾಲಗಾರರಿಗೆ ಉಪಯುಕ್ತವಾಗುವ ಇತರ ಪರಿಹಾರವನ್ನು ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಕೋವಿಡ್-19ನಿಂದ ಉದ್ಭವಿಸಿದ ಆರ್ಥಿಕ ಸಂಕಷ್ಟದ ಪರಿಸ್ಥಿತಿಗೆ ಆರ್‌ಬಿಐ ಸೂಕ್ತ ಪ್ರತಿಕ್ರಿಯೆ ನೀಡಿದೆ. ಆರ್‌ಬಿಐ ತೆಗೆದುಕೊಂಡ ಕ್ರಮಗಳು ಕೋವಿಡ್-19ನ ಪರಿಸ್ಥಿತಿಯನ್ನು ಎದುರಿಸಲು ಸಮರ್ಥವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.