ಕರ್ನಾಟಕ

karnataka

ETV Bharat / business

ಪಿಎಂ ಕೇರ್ಸ್ ನಿಧಿಗೆ 200 ಕೋಟಿ ರೂ. ದೇಣಿಗೆ ನೀಡಿದ ಭಾರತೀಯ ಯೋಧರು: ಯಾವ ಪಡೆ ಎಷ್ಟು ಕೊಟ್ಟಿದೆ? - ಪಿಎಂ ಕೇರ್ಸ್ ದೇಣಿಗೆ

ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿ ತಮ್ಮ ವೇತನದಲ್ಲಿ ಪಿಎಂ - ಕೇರ್ಸ್ ನಿಧಿಗೆ 200 ಕೋಟಿ ರೂ.ನಷ್ಟು ದೇಣಿಗೆ ಕೊಟ್ಟಿವೆ. ಭಾರತೀಯ ವಾಯುಪಡೆ (ಐಎಎಫ್) ಮತ್ತು ಭಾರತೀಯ ನೌಕಾಪಡೆ ಆರ್‌ಟಿಐ ಕಾಯ್ದೆಯಡಿ ಮಾಹಿತಿ ನೀಡಿದ್ದರೇ ಭಾರತೀಯ ಸೇನೆ ಹಂಚಿಕೊಳ್ಳಲು ನಿರಾಕರಿಸಿದೆ.

Indian armed
ಸೇನೆ

By

Published : Dec 18, 2020, 3:58 PM IST

ನವದೆಹಲಿ:ದೊಡ್ಡ- ದೊಡ್ಡ ಕಾರ್ಪೊರೇಟ್‌, ಬ್ಯಾಂಕ್​, ಉದ್ಯಮಿ, ಸಿನಿಮಾ ನಟರು, ಕ್ರೀಡಾಪಟುಗಳು ಮಾತ್ರವಲ್ಲದೇ ಭಾರತೀಯ ಸಶಸ್ತ್ರ ಪಡೆಗಳು ಸಹ ಪ್ರಧಾನ ಮಂತ್ರಿ ನಾಗರಿಕರ ಸಹಾಯ ಮತ್ತು ತುರ್ತು ಪರಿಹಾರ ಅಥವಾ ಪಿಎಂ-ಕೇರ್ಸ್ ನಿಧಿಗೆ ದೊಡ್ಡ ಪ್ರಮಾಣದಲ್ಲಿ ದೇಣಿಗೆ ನೀಡಿವೆ.

ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿ ತಮ್ಮ ವೇತನದಲ್ಲಿ ಪಿಎಂ-ಕೇರ್ಸ್ ನಿಧಿಗೆ 200 ಕೋಟಿ ರೂ.ಯಷ್ಟು ದೇಣಿಗೆ ಕೊಟ್ಟಿವೆ. ಭಾರತೀಯ ವಾಯುಪಡೆ (ಐಎಎಫ್) ಮತ್ತು ಭಾರತೀಯ ನೌಕಾಪಡೆ ಆರ್‌ಟಿಐ ಕಾಯ್ದೆಯಡಿ ಮಾಹಿತಿ ನೀಡಿದ್ದರೇ ಭಾರತೀಯ ಸೇನೆ ಹಂಚಿಕೊಳ್ಳಲು ನಿರಾಕರಿಸಿದೆ.

ಆರ್‌ಟಿಐ ಪ್ರತಿಕ್ರಿಯೆ ಪ್ರಕಾರ, ಐಎಎಫ್ ತಮ್ಮ ಸಿಬ್ಬಂದಿ ಒಂದು ದಿನದ ವೇತನದಿಂದ ಏಪ್ರಿಲ್‌ನಿಂದ ಅಕ್ಟೋಬರ್​ವರೆಗೆ ಒಟ್ಟು 29.18 ಕೋಟಿ ರೂ. ನೀಡಿದ್ದಾರೆ. ಏಪ್ರಿಲ್​ನಲ್ಲಿ ಐಎಎಫ್ 25.03 ಕೋಟಿ ರೂ. ಕೊಟ್ಟಿದೆ. ಮೇ ತಿಂಗಳಲ್ಲಿ 75.24 ಲಕ್ಷ ರೂ. ಜೂನ್‌ನಲ್ಲಿ 1.08 ಕೋಟಿ ರೂ., ಜುಲೈನಲ್ಲಿ 73.93 ಲಕ್ಷ ರೂ., ಆಗಸ್ಟ್​ನಲ್ಲಿ 61.18 ಲಕ್ಷ ರೂ., ಸೆಪ್ಟೆಂಬರ್‌ನಲ್ಲಿ 50.27 ಲಕ್ಷ ರೂ. ಮತ್ತು ಅಕ್ಟೋಬರ್‌ನಲ್ಲಿ 46.70 ಲಕ್ಷ ರೂ. ದೇಣಿಗೆಯಾಗಿ ಕೊಟ್ಟಿದೆ.

ಕಾರು ಪ್ರಿಯರಿಗೆ ಶಾಕಿಂಗ್!: ಹೊಸ ವರ್ಷದಿಂದ ಈ ಕಾರುಗಳು ದರದಲ್ಲಿ ಭಾರಿ ಏರಿಕೆ

ನೌಕಾಪಡೆಯು ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ ಅಧಿಕಾರಿ ಮತ್ತು ನಾವಿಕರ ಸಿಬ್ಬಂದಿ 12.41 ಕೋಟಿ ರೂ. ಪಿಎಂ-ಕೇರ್ಸ್‌ಗೆ ನೀಡಿದೆ. ನೌಕಾಪಡೆಯ ನಾಗರಿಕ ಸಿಬ್ಬಂದಿ 4.36 ಕೋಟಿ ರೂ. ಕೊಟ್ಟಿದೆ.

ಭಾರತೀಯ ಸೇನೆಯು ಆರ್​ಟಿಐಗೆ ಸ್ಪಂದಿಸಲಿಲ್ಲ. ಆದರೆ, ಎಡಿಜಿಪಿಐ (ಸಾರ್ವಜನಿಕ ಮಾಹಿತಿ ಹೆಚ್ಚುವರಿ ನಿರ್ದೇಶನಾಲಯ) ಮೇ 15ರಂದು ಟ್ವೀಟ್ ಮಾಡಿ, ಕೋವಿಡ್ -19 ವಿರುದ್ಧದ ರಾಷ್ಟ್ರದ ಹೋರಾಟಕ್ಕೆ ಭಾರತೀಯ ಸೇನಾ ಸಿಬ್ಬಂದಿ ಏಪ್ರಿಲ್ 2020ಕ್ಕೆ ಒಂದು ದಿನದ ವೇತನವಾಗಿ 157.71 ಕೋಟಿ ರೂ. ಸಾಂಕ್ರಾಮಿಕ ರೋಗದ ಪಿಎಂ ಕೇರ್ಸ್​ ನಿಧಿಗೆ ದೇಣಿಗೆ ಕೊಡಲಾಗಿದೆ ಎಂದು ಹಂಚಿಕೊಂಡಿತ್ತು.

ABOUT THE AUTHOR

...view details