ಲಾಸ್ ಏಂಜಲೀಸ್ ( ಅಮೆರಿಕ): ಕ್ಯಾಲಿಫೋರ್ನಿಯಾದ ಸ್ಯಾನ್ ರಾಮನ್ ಪಟ್ಟಣದ ಮೇಯರ್ ಸ್ಥಾನಕ್ಕೆ ಭಾರತೀಯ-ಅಮೆರಿಕನ್ ಉದ್ಯಮಿ ಅಪರ್ಣಾ ಮದಿರೆಡ್ಡಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ನಾಲ್ಕು ಅವಧಿಯ ನಂತರ ಸ್ಥಾನದಿಂದ ಕೆಳಗಿಳಿಯಲಿರುವ ಪ್ರಸ್ತುತ ಮೇಯರ್ ಬಿಲ್ ಕ್ಲಾರ್ಕ್ಸನ್ ಅವರ ಸ್ಥಾನಕ್ಕೆ ಮದಿರೆಡ್ಡಿ ಬರಲಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಈ ಸ್ಥಾನಕ್ಕಾಗಿ ತನ್ನ ಅಭಿಯಾನವನ್ನು ಪ್ರಾರಂಭಿಸಿದ ಮೊದಲ ವ್ಯಕ್ತಿ ಮದಿರೆಡ್ಡಿಯಾಗಿದ್ದಾರೆ. ಇದಕ್ಕೂ ಮೊದಲು ಅವರು, ರಾಮನ್ ನಗರ ಮಂಡಳಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು ಎಂದು ಇಂಡಿಯಾ ವೆಸ್ಟ್ ಪತ್ರಿಕೆ ಇದೇ ವೇಳೆ ಉಲ್ಲೇಖಿಸಿದೆ.
ಉತ್ತರ ಕ್ಯಾಲಿಫೋರ್ನಿಯಾದ ಪೂರ್ವ ಕೊಲ್ಲಿಯಲ್ಲಿರುವ ಸ್ಯಾನ್ ರಾಮನ್‌ನಲ್ಲಿ ಮದಿರೆಡ್ಡಿ ಹಲವಾರು ಸ್ವಯಂಸೇವಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.