ಕರ್ನಾಟಕ

karnataka

ETV Bharat / business

ಇದುವರೆಗೂ ಹಿಂದೆ ಇದ್ದ ಭಾರತ, 4ನೇ ಕೈಗಾರಿಕಾ ಕ್ರಾಂತಿಯ ಜಾಗತಿಕ ಲೀಡರ್​: ಮುಖೇಶ್ ಅಂಬಾನಿ - ರಿಲಯನ್ಸ್​ ಇಂಡಸ್ಟ್ರೀಸ್

ಭಾರತವು ಮೊದಲ ಎರಡು ಕೈಗಾರಿಕಾ ಕ್ರಾಂತಿಗಳನ್ನು ಹಾಗೂ ಅವುಗಳಿಂದ ಉಂಟಾದ ಬದಲಾವಣೆಗಳನ್ನು ತಪ್ಪಿಸಿಕೊಂಡಿದೆ. ವಿಶ್ವವು ನಾಲ್ಕನೇ ಕೈಗಾರಿಕಾ ಕ್ರಾಂತಿಯತ್ತ ಹೆಜ್ಜೆ ಹಾಕುತ್ತಿರುವಾಗ, ಜಾಗತಿಕ ನಾಯಕನಾಗಿ ಹೊರಹೊಮ್ಮುವಂತಹ ಅವಕಾಶವು ಭಾರತಕ್ಕೆ ಇದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದ್ದಾರೆ.

Mukesh Ambani
ಮುಖೇಶ್ ಅಂಬಾನಿ

By

Published : Oct 8, 2020, 8:43 PM IST

ನವದೆಹಲಿ: ವಿಶ್ವವು ನಾಲ್ಕನೇ ಕೈಗಾರಿಕಾ ಕ್ರಾಂತಿಯತ್ತ ಹೆಜ್ಜೆ ಹಾಕುತ್ತಿರುವಾಗ, ಭಾರತಕ್ಕೆ ಕೇವಲ ನಾಯಕರನ್ನು ಹಿಡಿದಿಡಲು ಮಾತ್ರವಲ್ಲ, ಜಾಗತಿಕ ನಾಯಕನಾಗಿ ಹೊರಹೊಮ್ಮುವಂತಹ ಅವಕಾಶವಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದ್ದಾರೆ.

ಡಿಜಿಟಲ್ ಟ್ರಾನ್ಸ್‌ಫಾರ್ಮೇಷನ್ ವರ್ಲ್ಡ್ ಸೀರೀಸ್ 2020 ವರ್ಚ್ಯುವಲ್​ ಸಮಾವೇಶದಲ್ಲಿ ಮಾತನಾಡಿದ ಅಂಬಾನಿ, ಭಾರತವು ಮೊದಲ ಎರಡು ಕೈಗಾರಿಕಾ ಕ್ರಾಂತಿಗಳನ್ನು ಹಾಗೂ ಅವುಗಳಿಂದ ಉಂಟಾದ ಬದಲಾವಣೆಗಳನ್ನು ತಪ್ಪಿಸಿಕೊಂಡಿದೆ ಎಂದು ಹೇಳಿದರು.

ಮೂರನೇ ಕೈಗಾರಿಕಾ ಕ್ರಾಂತಿ ಸಮಯದಲ್ಲಿ ಮಾಹಿತಿ ತಂತ್ರಜ್ಞಾನವು ಪ್ರಾಮುಖ್ಯತೆ ಪಡೆದಾಗ, ಭಾರತವು ಆ ಓಟದ ಸ್ಪರ್ಧೆಗೆ ಸೇರ್ಪಡೆಯಾಯಿತು. ಆದರೆ, ನಾಯಕರನ್ನು ಹಿಡಿಯಲು ಪ್ರಯತ್ನಿಸುತ್ತಿದೆ. ನಾಲ್ಕನೇ ಕೈಗಾರಿಕಾ ಕ್ರಾಂತಿಯನ್ನು ಡಿಜಿಟಲ್ ಸಂಪರ್ಕದಂತಹ ಡಿಜಿಟಲ್ ಮತ್ತು ಭೌತಿಕ ತಂತ್ರಜ್ಞಾನಗಳ ಒಮ್ಮುಖದಿಂದ ನಡೆಸಲಾಗುತ್ತದೆ. ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಐಒಟಿ ಮತ್ತು ಸ್ಮಾರ್ಟ್ ಟೂಲ್​, ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್, ಬ್ಲಾಕ್‌ಚೇನ್, ಎಆರ್/ವಿಆರ್ ಮತ್ತು ಜೀನೋಮಿಕ್ಸ್ ನಂತಹ ಸಾಧನಗಳನ್ನು ಒಳಗೊಂಡಿದೆ ಎಂದು ವಿವರಿಸಿದರು.

ಈ ಕ್ರಾಂತಿಯಲ್ಲಿ ಭಾಗವಹಿಸಲು ಅಲ್ಟ್ರಾ-ಹೈ-ಸ್ಪೀಡ್ ಸಂಪರ್ಕ, ಕೈಗೆಟುಕುವ ಸ್ಮಾರ್ಟ್ ಸಾಧನಗಳು ಮತ್ತು ಪರಿವರ್ತನೆಯ ಡಿಜಿಟಲ್ ಅಪ್ಲಿಕೇಷನ್‌ಗಳು ಮತ್ತು ಪರಿಹಾರಗಳು ಎಂಬ ಮೂರು ಅಡಿಪಾಯದ ಅವಶ್ಯವಾಗಬೇಕಿವೆ. ಈ ಹಾದಿಯನ್ನು ಜಿಯೋ ಸುಗಮಗೊಳಿಸುವ ಗುರಿಯನ್ನು ಹೊಂದಿದೆ ಎಂದರು.

ಜಿಯೋಗೂ ಮುನ್ನ ಭಾರತವು 2ಜಿ ತಂತ್ರಜ್ಞಾನದಲ್ಲಿ ಸಿಲುಕಿಕೊಂಡಿತ್ತು. ಭಾರತದ ಡೇಟಾ ದುಃಖವನ್ನು ಕೊನೆಗೊಳಿಸಲು ಮತ್ತು ಡಿಜಿಟಲ್ ಕ್ರಾಂತಿ ಸಡಿಲಿಸಲು ಜಿಯೋ ಬಯಸಿದೆ. ನಾವು ವಿಶ್ವ ದರ್ಜೆಯ, ಎಲ್ಲ ಐಪಿ, ಭವಿಷ್ಯದ ಡಿಜಿಟಲ್ ನೆಟ್‌ವರ್ಕ್ ಅನ್ನು ನಿರ್ಮಿಸಿದ್ದೇವೆ. ಅದು ಹೆಚ್ಚಿನ ವೇಗ ಮತ್ತು ಉತ್ತಮ ವ್ಯಾಪ್ತಿ ಹೊಂದಿದೆ. ಭಾರತೀಯ ಟೆಲಿಕಾಂ ಉದ್ಯಮವು ತನ್ನ 2ಜಿ ನೆಟ್‌ವರ್ಕ್ ನಿರ್ಮಿಸಲು 25 ವರ್ಷಗಳು ತೆಗೆದುಕೊಂಡರೆ, ಜಿಯೋ ತನ್ನ 4ಜಿ ನೆಟ್‌ವರ್ಕ್ ಅನ್ನು ಮೂರು ವರ್ಷಗಳಲ್ಲಿ ನಿರ್ಮಿಸಿದೆ. ನಾವು ವಿಶ್ವದ ಅತ್ಯಂತ ಕಡಿಮೆ ಡೇಟಾ ಸುಂಕಗಳೊಂದಿಗೆ ಪ್ರಾರಂಭಿಸಿದ್ದೇವೆ. ಜಿಯೋ ಬಳಕೆದಾರರಿಗೆ ಧ್ವನಿ ಸೇವೆಗಳನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಿದ್ದೇವೆ ಎಂದು ಅಂಬಾನಿ ಹೇಳಿದರು.

ABOUT THE AUTHOR

...view details