ನ್ಯೂಯಾರ್ಕ್: ವಿಶ್ವ ಸಂಸ್ಥೆಯ ಜಾಗತಿಕ ಸಂತೋಷ ವರದಿ 2021ರಲ್ಲಿ ಭಾರತವು 149 ರಾಷ್ಟ್ರಗಳಲ್ಲಿ 139ನೇ ಸ್ಥಾನ ಪಡೆದಿದ್ದು, 2019 ಮತ್ತು 2020ರಲ್ಲಿ ಕ್ರಮವಾಗಿ 140 ಹಾಗೂ 144ನೇ ಸ್ಥಾನದಲ್ಲಿತ್ತು.
ಈ ವರ್ಷದ ವಿಶ್ವ ಸಂತೋಷ ವರದಿಯ ಎರಡು ಪಟ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ. ನಾವು ಎರಡು ಉದ್ದೇಶಗಳನ್ನು ಇರಿಸಿಕೊಂಡು ಸಂತಷ್ಟು ವರದಿ ಮಾಡಿದ್ದೇವೆ. ಮೊದಲನೆಯದ್ದು, ಜನರ ಜೀವನದ ರಚನೆ ಮತ್ತು ಗುಣಮಟ್ಟದ ಮೇಲೆ ಕೋವಿಡ್-19ರ ಪರಿಣಾಮಗಳನ್ನು ಕೇಂದ್ರೀಕರಿಸುವುದು. ಎರಡನೆಯದು ಪ್ರಪಂಚದಾದ್ಯಂತದ ಸರ್ಕಾರಗಳು ಸಾಂಕ್ರಾಮಿಕ ರೋಗವನ್ನು ಹೇಗೆ ಎದುರಿಸಿದೆ ಎಂಬುದನ್ನು ವಿವರಣೆ ಮತ್ತು ಮೌಲ್ಯಮಾಪನ. ಕೆಲವು ದೇಶಗಳು ಇತರರಿಗಿಂತ ಏಕೆ ಉತ್ತಮವಾಗಿ ಕಾರ್ಯನಿರ್ವಹಿಸಿವೆ ಎಂಬುದನ್ನು ವಿಶೇಷವಾಗಿ ವಿವರಿಸಲು ಪ್ರಯತ್ನಿಸುತ್ತೇವೆ ಎಂದು ತನ್ ಅಧಿಕೃತ ವೆಬ್ಸೈಟ್ನಲ್ಲಿ ಉಲ್ಲೇಖಿಸಿದೆ.