ಕರ್ನಾಟಕ

karnataka

ETV Bharat / business

ಭಾರತದ ರಫ್ತು ಶೇ 58ರಷ್ಟು ಏರಿಕೆ: ಮಾರ್ಚ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ವಹಿವಾಟು - ಸರಕು ರಫ್ತು ಬೆಳವಣಿಗೆ

ಮಾರ್ಚ್‌ನಲ್ಲಿ ಆಮದು ಶೇ 52.89ರಷ್ಟು ಏರಿಕೆಯಾಗಿ 48.12 ಶತಕೋಟಿ ಡಾಲರ್‌ಗೆ ತಲುಪಿದೆ. ಇಡೀ 2021ರ ಹಣಕಾಸು ವರ್ಷಕ್ಕೆ ಅದು ಶೇ 18.07ರಷ್ಟು ಕುಸಿದು 388.92 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಭಾರತವು ಮಾರ್ಚ್​ನಲ್ಲಿ ನಿವ್ವಳ ಆಮದುದಾರರಾಗಿದ್ದು, ವ್ಯಾಪಾರ ಕೊರತೆಯು 14.11 ಬಿಲಿಯನ್ ಡಾಲರ್​ ಆಗಿದ್ದು, ವ್ಯಾಪಾರದ ಕೊರತೆ 9.98 ಬಿಲಿಯನ್ ಡಾಲರ್​ಗೆ ಹೋಲಿಸಿದರೆ, ಇದು ಶೇ 41.4ರಷ್ಟು ಹೆಚ್ಚಾಗಿದೆ.

exports
exports

By

Published : Apr 2, 2021, 12:33 PM IST

ನವದೆಹಲಿ:ಭಾರತದ ಸರಕು ರಫ್ತು ವರ್ಷದಿಂದ ವರ್ಷಕ್ಕೆ 58 ಪ್ರತಿಶತದಷ್ಟು (ವೈಒವೈ) ಭಾರಿ ಏರಿಕೆ ಕಂಡಿದೆ. ಮಾರ್ಚ್‌ನಲ್ಲಿ ದಾಖಲೆಯ 34 ಶತಕೋಟಿ ಡಾಲರ್​ ರಫ್ತು ವಹಿವಾಟು ಮುಟ್ಟಿದೆ. ಇದು ಬೇಡಿಕೆಯ ಚೇತರಿಕೆ ಸೂಚಿಸುತ್ತದೆ. ಸರಕು ರಫ್ತಿನ ಬೆಳವಣಿಗೆಯು ಶೇ 21 ರಷ್ಟಿದೆ ಎಂಬುದನ್ನು ಸರ್ಕಾರ ಬಿಡುಗಡೆ ಮಾಡಿದ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬರುತ್ತದೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾದ ಅಡ್ಡಿ ಕಾರಣ 2020-21ರ ಆರ್ಥಿಕ ವರ್ಷದಲ್ಲಿ (ಎಫ್‌ವೈ 21) ರಫ್ತು ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇ 7.4ರಷ್ಟನ್ನು 290.18 ಶತಕೋಟಿ ಡಾಲರ್​ಗೆ ತಗ್ಗಿಸಿದೆ.

ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್: 2021ರ ಮಾರ್ಚ್​ನಲ್ಲಿ ಸರಕು ರಫ್ತು 58 ಪ್ರತಿಶತದಷ್ಟು ಹೆಚ್ಚಳವಾಗಿ 34 ಬಿಲಿಯನ್ ಡಾಲರ್​ಗೆ ಏರಿದೆ. ಇದು ಭಾರತೀಯ ಇತಿಹಾಸದಲ್ಲಿಯೇ ಅತ್ಯಧಿಕ. ಪ್ರಧಾನಿ ನರೇಂದ್ರ ಮೋದಿ ಅವರ ವ್ಯಾಪಾರ ನೀತಿಗಳು ಸಾಂಕ್ರಾಮಿಕ ರೋಗದ ನಡುವೆಯೂ ಭಾರತೀಯ ಆರ್ಥಿಕತೆಯನ್ನು ಐತಿಹಾಸಿಕ ಹೊಸ ಎತ್ತರಕ್ಕೆ ಕೊಡೊಯ್ದಿದೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: 2.38 ಕೋಟಿ ತೆರಿಗೆದಾರರಿಗೆ ₹ 2.62 ಲಕ್ಷ ಕೋಟಿ ಮರುಪಾವತಿ: ಇದ್ರಲ್ಲಿ ಕಾರ್ಪೊರೇಟ್​​ ಪಾಲು ಅತ್ಯಧಿಕ

ಮಾರ್ಚ್‌ನಲ್ಲಿ ಆಮದು ಶೇ 52.89ರಷ್ಟು ಏರಿಕೆಯಾಗಿ 48.12 ಶತಕೋಟಿ ಡಾಲರ್‌ಗೆ ತಲುಪಿದೆ. ಇಡೀ 2021ರ ಹಣಕಾಸು ವರ್ಷಕ್ಕೆ ಅದು ಶೇ 18.07ರಷ್ಟು ಕುಸಿದು 388.92 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಭಾರತವು ಮಾರ್ಚ್​ನಲ್ಲಿ ನಿವ್ವಳ ಆಮದುದಾರರಾಗಿದ್ದು, ವ್ಯಾಪಾರ ಕೊರತೆಯು 14.11 ಬಿಲಿಯನ್ ಡಾಲರ್​ ಆಗಿದ್ದು, ವ್ಯಾಪಾರದ ಕೊರತೆ 9.98 ಬಿಲಿಯನ್ ಡಾಲರ್​ಗೆ ಹೋಲಿಸಿದರೆ, ಇದು ಶೇ 41.4ರಷ್ಟು ಹೆಚ್ಚಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಂಟೇನರ್‌ಗಳ ಕೊರತೆ ಮತ್ತು ಸರಕು ಸಾಗಣೆಯ ಹೆಚ್ಚಳದಿಂದಾಗಿ ಸವಾಲುಗಳ ನಡುವೆಯೂ ರಫ್ತುಗಳಲ್ಲಿನ ವಹಿವಾಟು ಗಮನಾರ್ಹ ಏರಿಕೆ ಕಂಡು ಬಂದಿದೆ ಎಂದು ಫೆಡರೇಷನ್ ಆಫ್ ಇಂಡಿಯನ್ ರಫ್ತು ಸಂಸ್ಥೆಗಳ (ಎಫ್‌ಐಇಒ) ಮಹಾ ನಿರ್ದೇಶಕ (ಡಿಜಿ) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಜಯ್ ಸಹೈ ಹೇಳಿದ್ದಾರೆ.

ABOUT THE AUTHOR

...view details