ಕರ್ನಾಟಕ

karnataka

By

Published : Apr 14, 2020, 5:43 PM IST

ETV Bharat / business

ಪ್ರಧಾನಿ ಮೋದಿಯ ಲಾಕ್​ಡೌನ್ ವಿಸ್ತರಣೆ ಬೆಂಬಲಿಸಿದ ಭಾರತೀಯ ಉದ್ಯಮ..

ನೂತನ ಲಾಕ್‌ಡೌನ್ ಅನುಷ್ಠಾನದ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಬುಧವಾರ ಪ್ರಕಟಿಸಬಹುದು. ಹಾಟ್‌ಸ್ಪಾಟ್‌ಗಳಲ್ಲದ ಸ್ಥಳಗಳಲ್ಲಿ ಏಪ್ರಿಲ್ 20ರ ನಂತರ ಕೆಲ ವಿನಾಯಿತಿಗೆ ಅವಕಾಶ ನೀಡಬಹುದು ಎಂದು ಹೇಳಿದರು.

lockdown extension
ಲಾಕ್​ಡೌನ್ ವಿಸ್ತರಣೆ

ನವದೆಹಲಿ :ಮಾನವೀಯ ಬಿಕ್ಕಟ್ಟನ್ನು ತಪ್ಪಿಸಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಸ್ತರಣೆ ಅಗತ್ಯ ಎಂದು ಇಂಡಿಯಾ ಇಂಕ್ ಹೇಳಿದೆ.

ಏಪ್ರಿಲ್​​ 14ಕ್ಕೆ ಕೊನೆಗೊಳ್ಳಬೇಕಿದ್ದ ಮೂರು ವಾರಗಳ ದಿಗ್ಬಂಧನವನ್ನು ಪ್ರಧಾನಿ ನರೇಂದ್ರ ಮೋದಿ ಮೇ 3ರವರೆಗೆ ವಿಸ್ತರಣೆ ಮಾಡಿರುವುದಾಗಿ ಘೋಷಿಸಿದರು. 'ಕೋವಿಡ್-19 ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ಹಾನಿಗೊಳಗಾದ ಆರ್ಥಿಕತೆಯನ್ನು ಪುನರ್ನಿರ್ಮಿಸಲು ಪ್ರಚೋದಕ ಪ್ಯಾಕೇಜ್‌ ಅಗತ್ಯವಿದೆ' ಎಂದು ಭಾರತೀಯ ಉದ್ಯಮ ಒತ್ತಾಯಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತುತ ಲಾಕ್​ಡೌನ್ ಅವಧಿಯನ್ನು ಮೇ 3ರವರೆಗೆ ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್ ಹರಡುವಿಕೆ ತಪ್ಪಿಸಲು ಇದು ಅವಶ್ಯಕತೆಯಿದೆ ಎಂದು ಹೇಳಿದೆ. ನೂತನ ಲಾಕ್‌ಡೌನ್ ಅನುಷ್ಠಾನದ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಬುಧವಾರ ಪ್ರಕಟಿಸಬಹುದು. ಹಾಟ್‌ಸ್ಪಾಟ್‌ಗಳಲ್ಲದ ಸ್ಥಳಗಳಲ್ಲಿ ಏಪ್ರಿಲ್ 20ರ ನಂತರ ಕೆಲ ವಿನಾಯಿತಿಗೆ ಅವಕಾಶ ನೀಡಬಹುದು ಎಂದು ಹೇಳಿದರು.

ಕಳೆದ 21 ದಿನಗಳಲ್ಲಿನ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಭಾರತವು ಪ್ರತಿದಿನ 40,000 ಕೋಟಿ ರೂ. ನಷ್ಟ ಆಗಿರಬಹುದು. ಇದುವರೆಗೂ 7-8 ಲಕ್ಷ ಕೋಟಿ ರೂ. ಸಂಪತ್ತು ಕಳೆದುಕೊಳ್ಳಲಾಗಿದೆ ಎಂಬ ಅಂದಾಜು ಇದೆ. 2020ರ ಏಪ್ರಿಲ್-ಸೆಪ್ಟೆಂಬರ್​ ಅವಧಿಯಲ್ಲಿ ಸುಮಾರು 40 ಮಿಲಿಯನ್ ಉದ್ಯೋಗಗಳು ಅಪಾಯಕ್ಕೆ ಸಿಲುಕುವ ನಿರೀಕ್ಷೆಯಿದೆ. ಇದಕ್ಕೆ ತುರ್ತು ಪರಿಹಾರ ಪ್ಯಾಕೇಜ್ ನಿರ್ಣಾಯಕವಾಗಿದೆ ಎಂದು ಫಿಕ್ಕಿ ಅಧ್ಯಕ್ಷರಾದ ಸಂಗೀತಾ ರೆಡ್ಡಿ ಹೇಳಿದ್ದಾರೆ.

ABOUT THE AUTHOR

...view details