ನವದೆಹಲಿ : ಭಾರತೀಯ ಆರ್ಥಿಕತೆಯು 2020-21ರಲ್ಲಿ ಶೇ.7.3ರಷ್ಟು ಕುಸಿದಿದ್ದು, 2019-20ರಲ್ಲಿ ಶೇ. 4.0ರಷ್ಟು ಬೆಳವಣಿಗೆ ಆಗಿತ್ತು.
ಕೇಂದ್ರ ಅಂಕಿ-ಅಂಶ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ರಾಷ್ಟ್ರೀಯ ಸಾಂಖಿಕ್ಯ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 2019-20ರಲ್ಲಿ ಸುಮಾರು 145 ಲಕ್ಷ ಕೋಟಿ ರೂ.ಗಳಿಂದ ಇಳಿದು ಹಿಂದಿನ ಹಣಕಾಸು ವರ್ಷದ ಅವಧಿಯಲ್ಲಿ 135 ಲಕ್ಷ ಕೋಟಿ ರೂ.ಗೆ ತಲುಪಿದೆ.
2020-21ನೇ ಸಾಲಿನ ಸ್ಥಿರ (2011-12) ಬೆಲೆಗಳಲ್ಲಿನ ನೈಜ ಜಿಡಿಪಿ ಅಥವಾ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಈಗ ₹ 135.13 ಲಕ್ಷ ಕೋಟಿ ಮಟ್ಟ ತಲುಪಲಿದೆ ಎಂದು ಅಂದಾಜಿಸಲಾಗಿತ್ತು.