ನವದೆಹಲಿ:ವಿಶ್ವವೇ ಈಗ ಭಾರತದ ಹಿಂದೆ ಬಿದ್ದಿದೆ. ಮಲೇರಿಯಾಗೆ ಕೊಡುವ ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್ಸಿಕ್ಯೂ) ಔಷಧ ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಮುನ್ನಚ್ಚರಿಕಾ ಕ್ರಮವಾಗಿ ಎಚ್ಸಿಕ್ಯೂ ಮಾತ್ರ ನೀಡುತ್ತಿವೆ.
108 ರಾಷ್ಟ್ರಗಳಿಗೆ 8.5 ಕೋಟಿ ಮಲೇರಿಯಾ, 50 ಕೋಟಿ ಪ್ಯಾರೆಸಿಟಮಾಲ್ ಮಾತ್ರೆ ಹಂಚಿದ ಭಾರತ - ಕೋವಿಡ್ 19 ಸಾಂಕ್ರಾಮಿಕ
ಕೋವಿಡ್ ವೈರಸ್ನ ತೀವ್ರ ಪರಿಣಾಮ ಎದುರಿಸುತ್ತಿರುವ ರಾಷ್ಟ್ರಗಳಿಗೆ ಭಾರತ ಔಷಧಗಳನ್ನು ಹಂಚಿಕೆ ಮಾಡುವ ಮೂಲಕ ನೆರವಿನ ಹಸ್ತಚಾಚಿದೆ. ಅಮೆರಿಕ, ಸ್ಪೇನ್, ಜರ್ಮನಿ, ಬಹ್ರೇನ್, ಬ್ರೆಜಿಲ್, ನೇಪಾಳ, ಭೂತಾನ್, ಅಫ್ಘಾನಿಸ್ತಾನ, ಮಾಲ್ಡೀವ್ಸ್, ಬಾಂಗ್ಲಾದೇಶ, ಸೀಶೆಲ್ಸ್ ಮತ್ತು ಮಾರಿಷಸ್ಗೂ ರಫ್ತು ಮಾಡುತ್ತಿದೆ.
ಭಾರತವು ತನ್ನ ವೈದ್ಯಕೀಯ ರಾಜತಾಂತ್ರಿಕತೆ ಮುಖೇನ ಕಳೆದ ಎರಡು ವಾರಗಳಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟಕ್ಕೆ ನೆರವಾಗಲು 100ಕ್ಕೂ ಹೆಚ್ಚು ದೇಶಗಳಿಗೆ ಹೆಚ್ಚಿನ ಔಷಧಗಳನ್ನು ಕಳುಹಿಸಿದೆ. 108 ದೇಶಗಳಿಗೆ ಭಾರತ ಸುಮಾರು 85 ಮಿಲಿಯನ್ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಮತ್ತು 500 ದಶಲಕ್ಷ ಪ್ಯಾರೆಸಿಟಮಾಲ್ ಮಾತ್ರೆಗಳನ್ನು ಪೂರೈಸುತ್ತಿದೆ ಎಂದು ಸರ್ಕಾರಿ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.