ಕರ್ನಾಟಕ

karnataka

ETV Bharat / business

ಏರಿಕೆಯತ್ತ ಮುಖಮಾಡಿದ ಚಿನ್ನ... ಇಂದು ಕೂಡ 222ರೂ ಹೆಚ್ಚಳವಾದ ಹಳದಿ ಲೋಹ - ಚಿನ್ನ ಹಾಗೂ ಬೆಳ್ಳಿ ದರ

ಸ್ಪಾಟ್ ಬೇಡಿಕೆ ಹಿನ್ನೆಲೆ ಚಿನ್ನ ಹಾಗೂ ಬೆಳ್ಳಿಯ ಬೆಲೆ ಏರಿಕೆಯಾಗಿದೆ. ಈ ಮೂಲಕ ಚಿನ್ನ ಪ್ರಿಯರಿಗೆ ನಿರಾಸೆಯಾಗುವಂತೆ ಮಾಡಿದೆ.

increase-in-gold-and-silver-price
increase-in-gold-and-silver-price

By

Published : Aug 13, 2021, 4:33 PM IST

Updated : Aug 13, 2021, 8:13 PM IST

ನವದೆಹಲಿ:ಸ್ಪೆಕ್ಯುಲೇಟರ್‌ಗಳು ಸ್ಥಿರ ಬೇಡಿಕೆಯನ್ನು ದೃಢಪಡಿಸಿದ ಹಿನ್ನೆಲೆ, ಫ್ಯೂಚರ್ಸ್ ಟ್ರೇಡ್‌ನಲ್ಲಿ ಇಂದು ಚಿನ್ನದ ಬೆಲೆಗಳು ಪ್ರತಿ 10 ಗ್ರಾಂಗೆ ರೂ.222ರಷ್ಟು ಏರಿಕೆಯಾಗಿ ರೂ.46,516ಕ್ಕೆ ತಲುಪಿದೆ.

ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್‌ನಲ್ಲಿ, ಅಕ್ಟೋಬರ್ ವಿತರಣೆಯ ಚಿನ್ನದ ಒಪ್ಪಂದಗಳು ರೂ.153ರಷ್ಟು ಅಥವಾ ಶೇಕಡಾ 0.33ರಷ್ಟು ಹೆಚ್ಚಾಗಿದ್ದು, 13,127 ಲಾಟ್‌ಗಳ ವ್ಯಾಪಾರ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗೆ ರೂ. 46,516 ಆಗಿದೆ.

ಬೆಳ್ಳಿ ಬೆಲೆ ಕೂಡಾ ಶುಕ್ರವಾರದ ವಹಿವಾಟಿನಲ್ಲಿ ಪ್ರತಿ ಕೆಜಿಗೆ ರೂ.100 ಹೆಚ್ಚಾಗಿ 62,273ಕ್ಕೆ ಏರಿಕೆಯಾಗಿದೆ.

ಬಹು ಸರಕು ವಿನಿಮಯದಲ್ಲಿ, ಸೆಪ್ಟೆಂಬರ್ ವಿತರಣೆಯ ಬೆಳ್ಳಿ ಒಪ್ಪಂದಗಳು ರೂ. 413ರಷ್ಟು ಅಥವಾ ಶೇಕಡಾ 0.67 ಷ್ಟು ಏರಿಕೆಯಾಗಿದ್ದು, 11,771 ಲಾಟ್​ಗಳಲ್ಲಿ ಪ್ರತಿ ಕೆಜಿಗೆ 62,273 ರೂ. ತಲುಪಿದೆ.

ಕಳೆದ ಕೆಲ ದಿನಗಳಿಂದ ನಿರಂತರವಾಗಿ ಇಳಿಕೆಯಾಗುತ್ತಿದ್ದ ಚಿನ್ನ, ನಿನ್ನೆ ಹಾಗೂ ಇಂದು ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದ್ದು, ಈ ಮೂಲಕ ಮತ್ತೊಮ್ಮೆ 46 ಸಾವಿರ ಗಡಿ ದಾಟಿದೆ.

Last Updated : Aug 13, 2021, 8:13 PM IST

ABOUT THE AUTHOR

...view details