ನವದೆಹಲಿ: ನಿಧಾನಗತಿಯ ಆರ್ಥಿಕತೆಯ ನಡುವೆ ತಮ್ಮ ಎರಡನೇ ಆಯವ್ಯಯ ಮಂಡನೆ ಮಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವೈಯಕ್ತಿಕ ಆದಾಯ ತೆರಿಗೆದಾರರಿಗೆ ಕೆಲ ಐಚ್ಛಿಕ ಆಯ್ಕೆಗಳನ್ನು ನೀಡಿದ್ದಾರೆ.
ಬಜೆಟ್ನಲ್ಲಿ ಟ್ಯಾಕ್ಸ್ಗೆ ವಿನಾಯಿತಿ... 50 ಸೆಕೆಂಡ್ಗಳಲ್ಲಿ ನಿಮ್ಮ ಆದಾಯ ತೆರಿಗೆ ಲೆಕ್ಕಾಚಾರ ತಿಳಿಯಿರಿ - ಬಜೆಟ್ 2020 ಭಾರತ
ಹೊಸ ತೆರಿಗೆ ವಿಧಾನವು ಐಚ್ಛಿಕವಾಗಿರುತ್ತದೆ. ತೆರಿಗೆದಾರರಿಗೆ ವಿನಾಯಿತಿ ಮತ್ತು ಕಡಿತಗಳೊಂದಿಗೆ ಹಳೆಯ ವಿಧಾನದಲ್ಲಿ ಉಳಿಯಲು ಅಥವಾ ಆ ವಿನಾಯಿತಿಗಳಿಲ್ಲದೆ ಹೊಸದಾಗಿ ಕಡಿಮೆಯಾದ ತೆರಿಗೆ ದರವನ್ನು ಆರಿಸಿಕೊಳ್ಳಲು ಆಯ್ಕೆ ನೀಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ಹೊಸ ತೆರಿಗೆ ವಿಧಾನವು ಐಚ್ಛಿಕವಾಗಿರುತ್ತದೆ. ತೆರಿಗೆದಾರರಿಗೆ ವಿನಾಯಿತಿ ಮತ್ತು ಕಡಿತಗಳೊಂದಿಗೆ ಹಳೆಯ ವಿಧಾನದಲ್ಲಿ ಉಳಿಯಲು ಅಥವಾ ಆ ವಿನಾಯಿತಿಗಳಿಲ್ಲದೆ ಹೊಸದಾಗಿ ಕಡಿಮೆಯಾದ ತೆರಿಗೆ ದರವನ್ನು ಆರಿಸಿಕೊಳ್ಳಲು ಆಯ್ಕೆ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನೂತನ ತೆರಿಗೆ ವಿಧಾನದಲ್ಲಿ ತೆರಿಗೆದಾರನು ಕೋರಿಕೆಯ ವಿನಾಯಿತಿ ಮತ್ತು ಕಡಿತಗಳನ್ನು ಅವಲಂಬಿಸಿ ಗಣನೀಯ ತೆರಿಗೆ ಪ್ರಯೋಜನವನ್ನು ಪಡೆಯುತ್ತಾನೆ. ಉದಾಹರಣೆಗೆ: ಒಬ್ಬ ವ್ಯಕ್ತಿಯು ವರ್ಷದಲ್ಲಿ 15 ಲಕ್ಷ ರೂ. ಗಳಿಸುತ್ತಾನೆ. ಯಾವುದೇ ಕಡಿತಗಳನ್ನು ಪಡೆಯುವುದಿಲ್ಲ. ಹಳೆಯ ಮಾದರಿಯ 2,73,000 ರೂ.ಗೆ ಹೋಲಿಸಿದರೆ 1,95,000 ರೂ. ಮಾತ್ರ ಪಾವತಿಸಬೇಕಾಗುತ್ತದೆ. ಹೀಗಾಗಿ, ಹೊಸ ಮಾದರಿಯು ಅವರ ತೆರಿಗೆ ಹೊರೆಯನ್ನು 78,000 ಕೋಟಿ ರೂ.ಯಷ್ಟು ಕಡಿಮೆಗೊಳಿಸಿದಂತಾಗುತ್ತದೆ.