ಕರ್ನಾಟಕ

karnataka

ETV Bharat / business

ಐಟಿ ರಿಟರ್ನ್ಸ್ ಸಲ್ಲಿಕೆ ಗಡುವು ವಿಸ್ತರಣೆ: ಕೊನೆಯ ದಿನಾಂಕ ಯಾವುದು ಗೊತ್ತೇ?

ಕಾಯಿದೆಯ ಸೆಕ್ಷನ್ 139ರ ಉಪವಿಭಾಗ (1)ರ ಅಡಿ 2021 ಜುಲೈ 31ರಂದು ಆದಾಯದ ಆದಾಯ ಅಥವಾ ಮೌಲ್ಯಮಾಪನ ವರ್ಷ 2021-22ರ ದಿನಾಂಕವನ್ನು 2021ರ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

Income tax
Income tax

By

Published : May 20, 2021, 7:02 PM IST

Updated : May 20, 2021, 8:13 PM IST

ನವದೆಹಲಿ:ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಸೆಪ್ಟೆಂಬರ್ 30ರವರೆಗೆ ಎರಡು ತಿಂಗಳು ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಇದರ ಜೊತೆಗೆ ಸಚಿವಾಲಯವು ಕೋವಿಡ್​-19 ಕಾರಣದಿಂದಾಗಿ ಹಲವು ಶ್ರೇಣಿಯ ಅನುಸರಣೆಗಳ ಸಮಯ ವಿಸ್ತರಣೆ ಮಾಡಿದೆ.

ಕಾಯಿದೆಯ ಸೆಕ್ಷನ್ 139ರ ಉಪವಿಭಾಗ (1)ರ ಅಡಿಯಲ್ಲಿ 2021 ಜುಲೈ 31ರಂದು ಆದಾಯದ ಆದಾಯ ಅಥವಾ ಮೌಲ್ಯಮಾಪನ ವರ್ಷ 2021-22ರ ದಿನಾಂಕವನ್ನು 2021ರ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

ಓದಿ: ಅಮೆರಿಕ ಮಾರುಕಟ್ಟೆ ಪ್ರಭಾವಕ್ಕೆ ಕುಸಿದ ಮುಂಬೈ ಪೇಟೆ: 337 ಸೆನ್ಸೆಕ್ಸ್ ಇಳಿಕೆ

ಆದಾಯ ತೆರಿಗೆ ಕಾನೂನಿನ ಪ್ರಕಾರ, ಲೆಕ್ಕಪರಿಶೋಧನೆಯ ಅಗತ್ಯವಿಲ್ಲದ ಮತ್ತು ಸಾಮಾನ್ಯವಾಗಿ ಐಟಿಆರ್ -1 ಅಥವಾ ಐಟಿಆರ್ - 4 ಬಳಸಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ವ್ಯಕ್ತಿಗಳಿಗೆ ಐಟಿಆರ್ ಸಲ್ಲಿಸಲು ಗಡುವು ಜುಲೈ 31 ಆಗಿದೆ. ಕಂಪನಿಗಳಂತೆ ತೆರಿಗೆ ಪಾವತಿದಾರರಿಗೆ ಗಡುವು ಅಥವಾ ಆಡಿಟ್ ಮಾಡಬೇಕಾದ ಸಂಸ್ಥೆಗಳು ಅಕ್ಟೋಬರ್ 31 ಆಗಿರಲಿದೆ.

Last Updated : May 20, 2021, 8:13 PM IST

ABOUT THE AUTHOR

...view details