2020-21ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಕೇಂದ್ರ ಸರ್ಕಾರ ಡಿಸೆಂಬರ್ 31ರವರೆಗೆ ವಿಸ್ತರಿಸಿದ್ದು, ನಿಗದಿಪಡಿಸಿದ ಸಮಯದೊಳಗೆ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಅನಿವಾರ್ಯ.
ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ ಅನ್ನು ನವೀಕರಿಸಲಾಗಿದ್ದು, ಇದೇ ವೆಬ್‌ಸೈಟ್ ಮೂಲಕ ನೀವು ಐಟಿ ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ. ನೀವು ವೆಬ್ಸೈಟ್ಗೆ ಭೇಟಿ ಕೊಟ್ಟರೆ, ನಿಮ್ಮ ಮಾಹಿತಿಯನ್ನು ಮೊದಲೇ ತುಂಬಲ್ಪಟ್ಟ ಪೇಜ್ ಸಿದ್ಧವಾಗಿರುತ್ತದೆ. ಆ ವಿವರಗಳನ್ನು ಒಮ್ಮೆ ಪರಿಶೀಲಿಸಿ ಮತ್ತು ಅಗತ್ಯ ಬದಲಾವಣೆಗಳು ಮತ್ತು ಸೇರ್ಪಡೆಗಳನ್ನು ನೀವು ಮಾಡಬೇಕು. ತದನಂತರ ಇ-ಪರಿಶೀಲನೆ (e-Verifying) ನಡೆಸಿ, ಐಟಿ ರಿಟರ್ನ್ಸ್ ಪ್ರಕ್ರಿಯೆ ಪೂರ್ಣಗೊಳಿಸಿ.
ಒಂದು ವೇಳೆ ನಿಮ್ಮ ವಿವರ ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ಕಾಣಿಸದಿದ್ದರೆ?
ಕೆಲವೊಮ್ಮೆ ಇಂಥ ಸಮಸ್ಯೆಗಳು ಆದಾಯ ತೆರಿಗೆ ಪಾವತಿದಾರರಿಗೆ ಎದುರಾಗಬಹುದು. ಇದಕ್ಕೆ ಹಲವಾರು ಕಾರಣಗಳೂ ಇರಬಹುದು. ನಿಮ್ಮ ವಿವರಗಳನ್ನು ಸರಿಯಾಗಿ ನೀಡದಿರುವುದು, ಪ್ಯಾನ್ ಖಾತೆಯ (PAN Account) ವಿವರಗಳನ್ನು ನೀಡದಿರುವುದು ಅಥವಾ ತಪ್ಪಾಗಿ ನೀಡುವುದು, ಟಿಡಿಎಸ್ ಅಥವಾ ಟಿಸಿಎಸ್ ಸಲ್ಲಿಸುವ ವ್ಯಕ್ತಿಗಳು ಅಥವಾ ಸಂಸ್ಥೆಗಳು ಮಾಡುವ ತಪ್ಪುಗಳು, ತೆರಿಗೆ ಪಾವತಿ ಚಲನ್ಗಳಲ್ಲಿ ತಪ್ಪು ಮಾಹಿತಿ.. ಈ ರೀತಿಯ ಕಾರಣಗಳಿಂದ ಆದಾಯ ತೆರಿಗೆ ವಿವರಗಳು ವೆಬ್ಸೈಟ್ನ ನಿಮ್ಮ ಪೇಜ್ನಲ್ಲಿ ಕಾಣಿಸದೇ ಇರಬಹುದು. ಹೀಗಾದಾಗ,