ನವದೆಹಲಿ:ಭಾರತದಲ್ಲಿ ಉತ್ತಮ ಪರಿಸರಕ್ಕಾಗಿ ಹಣಕಾಸು ನೀತಿಗಳ ಆಯ್ಕೆಗಳನ್ನು ಮಾಡಿಕೊಳ್ಳಲಾಗಿದೆ. ಹಾಗೂ ನವೀಕರಿಸಬಹುದಾದ ಸಂಪನ್ಮೂಲ ಉತ್ತೇಜಿಸಲು ರಿಯಾಯಿತಿ ತೆರಿಗೆ ದರಗಳು ಜಾರಿಯಲ್ಲಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮುಂಬರುವ ಜಿ-20 ಉನ್ನತ ಮಟ್ಟದ ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ಸಭೆ ಹಿನ್ನೆಲೆಯಲ್ಲಿಇಟಲಿಯಲ್ಲಿಂದು ನಡೆದ 'ತೆರಿಗೆ ನೀತಿ ಮತ್ತು ಹವಾಮಾನ ಬದಲಾವಣೆ' ಕುರಿತ ವಿಚಾರ ಸಂಕಿರಣದ ವರ್ಚುವಲ್‌ನಲ್ಲಿ ಸೀತಾರಾಮನ್ ಭಾಗವಹಿಸಿದ್ದರು. ಈ ವೇಳೆ ಅವರು, ಪರಿಸರ ರಕ್ಷಣೆಗಾಗಿ ಭಾರತದಲ್ಲಿನ ಸಂಶೋಧನಾ ನೀತಿಗಳನ್ನು ವಿವರಿಸಿದರು. ದೇಶದ ಹೊಸ ಇಂಧನದ ಚಿತ್ರಣ, ಡಿಜಿಟಲ್ ನಾವೀನ್ಯತೆ ಮತ್ತು ಪರ್ಯಾಯ ಹೊಸ ಇಂಧನಗಳ ನೀತಿಗಳು ಸಹಕಾರಿಯಾಗಿವೆ ಎಂದು ಹೇಳಿದರು.