ಕರ್ನಾಟಕ

karnataka

ETV Bharat / business

ಗ್ರೇಟ್ ಡಿಪ್ರೆಶನ್​​​ ಬಳಿಕ  ದೊಡ್ಡ ಮಟ್ಟದ ಆರ್ಥಿಕ ಹಿಂಜರಿತ: ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಭವಿಷ್ಯ - ಅಂತರಾಷ್ಟ್ರೀಯ ಹಣಕಾಸು ನಿಧಿ

ಐಎಂಫ್​ನ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್, ಅನೇಕ ದೇಶಗಳು ಧನಸಹಾಯ ನೀತಿಗಳನ್ನು ಸರಾಗಗೊಳಿಸುವ ಮತ್ತು ಆರ್ಥಿಕ ಚಟುವಟಿಕೆಯನ್ನು ಪುನರಾರಂಭಿಸಲು ಅನುಮತಿಸಿದರೂ, ಚೇತರಿಕೆಯ ಹಾದಿಯು ಅನಿಶ್ಚಿತವಾಗಿದೆ ಎಂದು ಹೇಳಿದ್ದಾರೆ.

imf
imf

By

Published : Jun 17, 2020, 1:45 PM IST

ನವದೆಹಲಿ:ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತನ್ನ ಮುಂಬರುವ ಔಟ್‌ಲುಕ್ ಅಪ್‌ಡೇಟ್‌ನಲ್ಲಿ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಮತ್ತಷ್ಟು ಕೆಳಕ್ಕಿಳಿಸಿ ಪರಿಷ್ಕರಿಸುವ ಸಾಧ್ಯತೆಯಿದೆ.

ಅನೇಕ ದೇಶಗಳು ಧನಸಹಾಯ ನೀತಿಗಳನ್ನು ಸರಾಗಗೊಳಿಸುವ ಮತ್ತು ಆರ್ಥಿಕ ಚಟುವಟಿಕೆಯನ್ನು ಪುನಾರಂಭಿಸಲು ಅನುಮತಿಸಿದರೂ, ಚೇತರಿಕೆ ಹಾದಿಯು ಅನಿಶ್ಚಿತವಾಗಿದೆ ಎಂದು ಐಎಂಫ್​ನ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಬ್ಲಾಗ್ ಪೋಸ್ಟ್​ನಲ್ಲಿ ಹೇಳಿದ್ದಾರೆ.

ಗ್ರೇಟ್ ಡಿಪ್ರೆಶನ್​ನ ಬಳಿಕ ಮೊದಲ ಬಾರಿಗೆ ಮುಂದುವರಿದ ಮತ್ತು ಉದಯೋನ್ಮುಖ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟಿನ ಆರ್ಥಿಕ ಹಿಂಜರಿತವಾಗಲಿದೆ. ಈ ಬಿಕ್ಕಟ್ಟು ಬಡವರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ.

ಕೋವಿಡ್-19 ಈಗಾಗಲೇ ವಿಶ್ವಾದ್ಯಂತ ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಇದರ ಪರಿಣಾಮವಾಗಿ ಉಂಟಾಗುವ ಆರ್ಥಿಕ ಬಿಕ್ಕಟ್ಟು ಜಗತ್ತು ಈ ಹಿಂದೆ ಕಂಡಿರುವ ಎಲ್ಲ ಬಿಕ್ಕಟ್ಟಿನಿಂದ ಭಿನ್ನವಾಗಿದೆ ಎಂದು ಗೀತಾ ಗೋಪಿನಾಥ್ ಹೇಳಿದ್ದಾರೆ.

ABOUT THE AUTHOR

...view details