ಕರ್ನಾಟಕ

karnataka

By

Published : May 26, 2021, 2:52 PM IST

ETV Bharat / business

ಅಲೋಪತಿ ವೈದ್ಯಕೀಯ ಟೀಕೆ : ಬಾಬಾ ರಾಮ್​ದೇವ್​ಗೆ 1,000 ಕೋಟಿ ರೂ. ಮಾನನಷ್ಟ ನೋಟಿಸ್!

ಬಾಬಾ ರಾಮದೇವ್ ಅವರ ಹೇಳಿಕೆಯ ವಿರುದ್ಧ ಐಎಂಎ ವೈದ್ಯರಲ್ಲಿ ಸಾಕಷ್ಟು ಅಸಮಾಧಾನವಿದೆ. ಈ ಹೇಳಿಕೆಯನ್ನು ತಪ್ಪಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿ ಕೇಂದ್ರ ಆರೋಗ್ಯ ಸಚಿವರು ರಾಮ್​ದೇವ್ ಅವರಿಗೆ ನೋಟಿಸ್ ಕಳುಹಿಸಿದ್ದಾರೆ ಎಂದು ಖನ್ನಾ ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ..

Ramdev
Ramdev

ರಾಂಚಿ : ಅಲೋಪತಿ ವೈದ್ಯರ ವಿರುದ್ಧ ಮಾಡಿದ ಟೀಕೆಗಳ ಬಗ್ಗೆ ಉತ್ತರಾಖಂಡದ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್ ಅವರಿಗೆ 1,000 ಕೋಟಿ ರೂ. ಮಾನನಷ್ಟ ನೋಟಿಸ್​ ನೀಡುವುದಾಗಿ ಎಚ್ಚರಿಸಿದೆ.

ಅಲೋಪತಿ ವೈದ್ಯರ ವಿರುದ್ಧದ ಹೇಳಿಕೆ ವಿಡಿಯೋ ಪೋಸ್ಟ್ ಆದ ಬಳಿಕ ದೇಶಾದ್ಯಂತ ರಾಮ್​ದೇವ್​ ವ್ಯಾಪಕ ಟೀಕೆಗೆ ಗುರಿಯಾದರು. 'ಮುಂದಿನ 15 ದಿನಗಳಲ್ಲಿ ಲಿಖಿತ ಕ್ಷಮೆಯಾಚನೆ ಕೇಳದಿದ್ದರೇ ಅವರಿಂದ 1,000 ಕೋಟಿ ರೂ. ಮಾನನಷ್ಟ ಕೋರಲಾಗುವುದು' ಎಂದು ನೋಟಿಸ್‌ನಲ್ಲಿ ತಿಳಿಸಿದೆ.

ಈ ಮಾನಹಾನಿ ನೋಟಿಸ್‌ಗೆ ಸಂಬಂಧಿಸಿದಂತೆ ಸೋಮವಾರ ಸಂಜೆ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗೆ ಪತ್ರ ಕಳುಹಿಸಲಾಗಿದೆ ಎಂದು ಐಎಂಎ ಉತ್ತರಾಖಂಡ ಅಧ್ಯಕ್ಷ ಡಾ.ಅಜಯ್ ಖನ್ನಾ ತಿಳಿಸಿದ್ದಾರೆ.

ಬಾಬಾ ರಾಮದೇವ್ ಅವರ ಹೇಳಿಕೆಯ ವಿರುದ್ಧ ಐಎಂಎ ವೈದ್ಯರಲ್ಲಿ ಸಾಕಷ್ಟು ಅಸಮಾಧಾನವಿದೆ. ಈ ಹೇಳಿಕೆಯನ್ನು ತಪ್ಪಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿ ಕೇಂದ್ರ ಆರೋಗ್ಯ ಸಚಿವರು ರಾಮ್​ದೇವ್ ಅವರಿಗೆ ನೋಟಿಸ್ ಕಳುಹಿಸಿದ್ದಾರೆ ಎಂದು ಖನ್ನಾ ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಹಿಂದೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರ ಪತ್ರವನ್ನು ಸ್ವೀಕರಿಸಿದ ನಂತರ ರಾಮ್​ದೇವ್ ಅವರು ಅಲೋಪತಿ ಔಷಧದ ಕುರಿತ ಹೇಳಿಕೆಗಳನ್ನು ಹಿಂತೆಗೆದುಕೊಂಡಿದ್ದರು. ಅವರು ಪತಂಜಲಿ ಸಂಸ್ಥಾಪಕರ ಹೇಳಿಕೆಗಳನ್ನು ಸೂಕ್ತವಲ್ಲ ಎಂದರು.

ನಾವು ಆಧುನಿಕ ವೈದ್ಯಕೀಯ ವಿಜ್ಞಾನ ಮತ್ತು ಅಲೋಪತಿ ವಿರೋಧಿಸುವುದಿಲ್ಲ. ಅಲೋಪತಿ ಶಸ್ತ್ರಚಿಕಿತ್ಸೆ ಮತ್ತು ಜೀವ ಉಳಿಸುವ ವ್ಯವಸ್ಥೆಯಲ್ಲಿ ಅಪಾರ ಪ್ರಗತಿಯನ್ನು ತೋರಿಸಿದೆ ಮತ್ತು ಮಾನವೀಯತೆಗೆ ಸೇವೆ ಸಲ್ಲಿಸಿದೆ ಎಂದು ನಾವು ನಂಬುತ್ತೇವೆ. ಸ್ವಯಂಸೇವಕರ ಸಭೆಯಲ್ಲಿ ನಾನು ಓದುತ್ತಿದ್ದ ವಾಟ್ಸ್‌ಆ್ಯಪ್ ಸಂದೇಶದ ಭಾಗವಾಗಿ ನನ್ನ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಇದು ಯಾರೊಬ್ಬರ ಭಾವನೆಗೆ ಧಕ್ಕೆ ತಂದಿದ್ದರೆ ಕ್ಷಮಿಸಿ ಎಂದು ರಾಮ್‌ದೇವ್ ಹರ್ಷವರ್ಧನ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details