ನವದೆಹಲಿ:'ರಾಟನ್ ಟಿ' ಕಂಪನಿಗೆ ('Rotten T') ಏರ್ ಇಂಡಿಯಾ ಕಂಪನಿಯನ್ನು ಮಾರಾಟ ಮಾಡಿದ್ದೇ ಆದಲ್ಲಿ ಕೇಂದ್ರ ಸರ್ಕಾರದ ಮುಖ್ಯ ನಾಯಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ರಾಜ್ಯಸಭಾ ಸದಸ್ಯ, ಬಿಜೆಪಿ ನಾಯಕ ಹಾಗೂ ಖ್ಯಾತ ವಕೀಲ ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಏರ್ ಏಷ್ಯಾಕ್ಕಾಗಿ ಅಕ್ರಮ ಹಣ ವರ್ಗಾವಣೆ, ದುಬೈನಲ್ಲಿ ಭಯೋತ್ಪಾದಕರಿಗೆ ಹಣ ಪಾವತಿ, ಎಫ್ಐಪಿಬಿ ಲೈಸೆನ್ಸ್ ಪಡೆಯಲು ಏರ್ ಏಷ್ಯಾ, ವಿಸ್ತಾರಾ ಮತ್ತು ನೀರಾ ರಾಡಿಯಾ ಟೇಪ್‌ಗಳ ಮೂಲಕ ವಂಚನೆ ನಡೆಸಿದ ಟಾಟಾ ಸಮೂಹದ ಉದ್ಯಮದ ಕುರಿತು ಜಾರಿ ನಿರ್ದೇಶನಾಲಯ ಈಗಾಗಲೇ ತನಿಖೆ ನಡೆಸುತ್ತಿದೆ. ಇಂಥ ರಾಟನ್ ಟಿ ಕಂಪನಿಗೆ ಏರ್ ಇಂಡಿಯಾ ಕಂಪನಿಯನ್ನು ಮಾರಲು ಮುಂದಾದರೆ, ಆಡಳಿತದಲ್ಲಿರುವ ದೊಡ್ಡವರ ವಿರುದ್ಧ ಕ್ರಿಮಿನಲ್ ಕೇಸ್ ಫೈಲ್ ಮಾಡುತ್ತೇನೆ ಸ್ವಾಮಿ ಟ್ವೀಟ್ನಲ್ಲಿ ಹೇಳಿದ್ದಾರೆ.