ಕರ್ನಾಟಕ

karnataka

ETV Bharat / business

'ಭಾರತ ಸಂಕಷ್ಟದಲ್ಲಿದ್ದರೆ ಇಡೀ ಜಗತ್ತೇ ತೊಂದರೆಯಲ್ಲಿ ಸಿಲುಕಿದಂತೆ'

ಅಮೆರಿಕ-ಇಂಡಿಯಾ ಬಿಸ್ನೆಸ್ ಕೌನ್ಸಿಲ್‌ನ ಅಧ್ಯಕ್ಷೆ ನಿಶಾ ದೇಸಾಯಿ ಬಿಸ್ವಾಲ್, ಭಾರತದಲ್ಲಿ ಕೋವಿಡ್‌ ಸಾವುನೋವುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತ ಸಂಕಷ್ಟದಲ್ಲಿದ್ದರೆ ಇಡೀ ಜಗತ್ತು ಸಿಲುಕಿದ ಹಾಗೆ ಎಂದು ಹೇಳಿದ್ದಾರೆ.

USIBC president
USIBC president

By

Published : May 6, 2021, 1:59 PM IST

ನ್ಯೂಯಾರ್ಕ್​:ಭಾರತವು ತೀವ್ರ ಸಂಕಷ್ಟದಲ್ಲಿದ್ದರೆ, ಜಗತ್ತು ತೀವ್ರ ಸಂಕಷ್ಟದಲ್ಲಿದೆ ಎಂದೇ ಅರ್ಥ ಎಂದು ಅಮೆರಿಕದ ಉನ್ನತ ವ್ಯಾಪಾರ ಒಕ್ಕೂಟದ ಗುಂಪಿನ ಮುಖ್ಯಸ್ಥರು ಹೇಳಿದ್ದಾರೆ.

ಭಾರತದಲ್ಲಿ ಕೋವಿಡ್​ ಬಿಕ್ಕಟ್ಟು ಉಲ್ಬಣಿಸಿದೆ. ಅಮೆರಿಕದ ಕಾರ್ಪೊರೇಟ್ ವಲಯವು ಭಾರತಕ್ಕೆ ಕೋವಿಡ್​ ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ಹೋರಾಡಲು ಸಹಾಯ ಮಾಡುತ್ತಿದೆ. ಭಾರತದ ಬೆಳವಣಿಗೆಗಳು ಕಾರ್ಪೊರೇಟ್ ಸಮುದಾಯಕ್ಕೆ ಪೆಟ್ಟು ಕೊಟ್ಟಿದೆ ಎಂದು ಅಮೆರಿಕ-ಇಂಡಿಯಾ ಬಿಸಿನೆಸ್ ಕೌನ್ಸಿಲ್ ಅಧ್ಯಕ್ಷೆ ನಿಶಾ ದೇಸಾಯಿ ಬಿಸ್ವಾಲ್ ಸಂದರ್ಶನವೊಂದರಲ್ಲಿ ಪಿಟಿಐಗೆ ತಿಳಿಸಿದ್ದಾರೆ.

ಅಮೆರಿಕದ ಪ್ರಮುಖ 40 ಕಂಪನಿಗಳ ಸಿಇಒಗಳನ್ನು ಒಳಗೊಂಡ ಹೊಸದಾಗಿ ರಚಿಸಲಾದ ಗ್ಲೋಬಲ್ ಟಾಸ್ಕ್ ಫೋರ್ಸ್ ಆನ್ ಪಾಂಡೆಮಿಕ್ ರೆಸ್ಪಾನ್ಸ್, ಭಾರತಕ್ಕೆ ಹಡಗುಗಳ ಮೂಲಕ 1,000 ವೆಂಟಿಲೇಟರ್‌ಗಳು ಮತ್ತು 25,000 ಆಮ್ಲಜನಕ ಸಾಂದ್ರಕಗಳನ್ನು ಒಳಗೊಂಡಂತೆ ಬೃಹತ್ ಸಹಾಯವನ್ನು ಘೋಷಿಸಿದೆ.

ಭಾರತ ಸಂಕಷ್ಟದಲ್ಲಿದ್ದು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಈ ಮುಂದಿನ ಹಂತವನ್ನು ನಾವು ಹೇಗೆ ನಿರ್ವಹಿಸುತ್ತೇವೆ ಎಂಬುದನ್ನು ಕಂಡುಕೊಳ್ಳಲು ಒಂದು ಸೂರಿನಡಿ ಕಾರ್ಯೋನ್ಮುಖವಾಗಬೇಕು ಎಂದು ಬಿಸ್ವಾಲ್ ತಿಳಿಸಿದ್ದಾರೆ.

ABOUT THE AUTHOR

...view details