ನವದೆಹಲಿ:ಪುಲ್ವಾಮಾ ಪ್ರತೀಕಾರಕ್ಕೆ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿನ ಬಾಲಾಕೋಟ್ ಭಯೋತ್ಪಾದಕರ ತರಬೇತಿ ಶಿಬಿರವನ್ನು ಧ್ವಂಸ ಮಾಡಿದ ಇಸ್ರೇಲ್ ನಿರ್ಮಿತ 'ವಿಧ್ವಂಸಕ ಬಂಕರ್ ಬಸ್ಟರ್ ಸ್ಪೈಸ್ 2000' ಸಿಡಿ ತಲೆಯ ಹೊಸ ಅವತರಣಿಕೆಯ ಬಾಂಬ್ಗಳನ್ನು ಭಾರತೀಯ ವಾಯುಪಡೆ (ಐಎಎಫ್) ಸ್ವೀಕರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಅವತರಣಿಕೆಯ ಬಂಕರ್ ಬಸ್ಟರ್ ಸ್ಪೈಸ್- 2000 ಸಿಡಿ ತಲೆಗಳನ್ನು ಇಸ್ರೇಲ್ ಪ್ರಥಮ ಹಂತದಲ್ಲಿ ಭಾರತಕ್ಕೆ ಹಸ್ತಾಂತರಿಸಿದೆ. ಐಎಎಫ್ನ ಕೇಂದ್ರ ಕಚೇರಿಯಾದ ಗ್ವಾಲಿಯರ್ ಕ್ಯಾಂಪ್ ಇವುಗಳನ್ನು ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರವು ಸೇನೆಯ ಮೂರು ದಳಗಳಿಗೂ ತುರ್ತು ಪರಿಸ್ಥಿತಿ ನಿರ್ವಹಣೆಗಾಗಿ ತಲಾ 250 ಕೋಟಿ ರೂಪಾಯಿ ಮೀಸಲಿರಿಸಿ ಇಸ್ರೇಲ್ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಮೂಲಗಳ ಪ್ರಕಾರ ವಾಯುಸೇನೆಯು ಸ್ಪೈಸ್- 2000 ಮಾರ್ಕ್ 84 ಸರಣಿಯ ಬಾಂಬ್ಗಳನ್ನು ಖರೀದಿಸಿದೆ.