ನವದೆಹಲಿ:ಫ್ರಾನ್ಸ್ ದೇಶ ಭಾರತಕ್ಕೆ ಮೊದಲ ಹಂತದಲ್ಲಿ ರಫೆಲ್ ಫೈಟರ್ ಜೆಟ್ಗಳನ್ನು ನಿನ್ನೆ (ಸೆಪ್ಟೆಂಬರ್ 19ರಂದು) ಹಸ್ತಾಂತರಿಸಿದೆ ಎಂದು ಭಾರತೀಯ ವಾಯುಪಡೆ ಮೂಲಗಳು ತಿಳಿಸಿವೆ.
ಭಾರತೀಯ ಸೇನಾ ಬತ್ತಳಿಕೆಗೆ 'ರಫೆಲ್ ಫೈಟರ್ ಜೆಟ್' ಸೇರ್ಪಡೆ, ಪಾಕ್ಗೆ ಶಾಕ್ - India- France
ದೇಶದ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ತುರ್ತು ಅಗತ್ಯತೆಗಳನ್ನು ಪೂರೈಸಿಕೊಳ್ಳಲು 2016ರ ಸೆಪ್ಟೆಂಬರ್ ತಿಂಗಳಲ್ಲಿ ಫ್ರೆಂಚ್ ಸರ್ಕಾರ ಮತ್ತು ಡಾಸಾಲ್ಟ್ ವಿಮಾನಯಾನ ಕಂಪನಿಯೊಂದಿಗೆ ಸುಮಾರು 7.8 ಶತಕೋಟಿ ರೂಗೂ ಹೆಚ್ಚಿನ ಮೊತ್ತದಲ್ಲಿ 36 ರಫೆಲ್ ಯುದ್ಧ ವಿಮಾನ ಖರೀದಿಗೆ ಭಾರತ ಕರಾರು ಮಾಡಿಕೊಂಡಿತ್ತು. ಪ್ರಥಮ ಹಂತದ ಫೈಟರ್ ಜೆಟ್ಗಳು ಭಾರತೀಯ ವಾಯುಪಡೆ ಸೇರ್ಪಡೆಯಾಗಿವೆ.
ದೇಶದ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ತುರ್ತು ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸೆಪ್ಟೆಂಬರ್ 2016ರ ತಿಂಗಳಲ್ಲಿ ಫ್ರೆಂಚ್ ಸರ್ಕಾರ ಮತ್ತು ಡಾಸಾಲ್ಟ್ ವಿಮಾನಯಾನ ಕಂಪನಿಯೊಂದಿಗೆ ಸುಮಾರು 7.8 ಶತಕೋಟಿ ರೂಗೂ ಹೆಚ್ಚಿನ ಮೊತ್ತದಲ್ಲಿ 36 ರಫೆಲ್ ಯುದ್ಧ ವಿಮಾನ ಖರೀದಿಗೆ ಭಾರತ ಒಪ್ಪಂದ ಮಾಡಿಕೊಂಡಿತ್ತು. ಇದರ ಭಾಗವಾಗಿ ಪ್ರಥಮ ಹಂತದ ಫೈಟರ್ ಜೆಟ್ಗಳು ಭಾರತೀಯ ವಾಯುಪಡೆ ಸೇರ್ಪಡೆಯಾಗಿವೆ.
ವಾಯುಪಡೆಯ ಡೆಪ್ಯೂಟಿ ಮುಖ್ಯಸ್ಥ ಏರ್ ಮಾರ್ಷಲ್ ವಿ.ಆರ್.ಚೌಧರಿ ಸುಮಾರು ಒಂದು ಗಂಟೆಗಳ ಕಾಲ ವಿಮಾನದಲ್ಲಿ ಹಾರಾಟ ನಡೆಸಿದರು. ಮೊದಲ ಹಂತದಲ್ಲಿ 4 ಜೆಟ್ಗಳನ್ನು ನೀಡಲು ಐಎಎಫ್ ಫ್ರೆಂಚ್ ಸರ್ಕಾರಕ್ಕೆ ತಿಳಿಸಿತ್ತು. ಆದರೆ, ವಾಯುಪಡೆ ಎಷ್ಟು ವಿಮಾನಗಳನ್ನು ಸ್ವೀಕರಿಸಿದೆ? ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಬೇಕಿದೆ.