ಕರ್ನಾಟಕ

karnataka

ETV Bharat / business

ತಿರುವಣ್ಣಾಮಲೈನಲ್ಲಿ ಸ್ಟಾಲಿನ್​ ಪ್ರಚಾರದ ದಿನವೇ ಡಿಎಂಕೆ ಶಾಸಕನ ಮನೆ ಸೇರಿ 10 ಕಡೆ ಐಟಿ ದಾಳಿ - ತಮಿಳುನಾಡು ವಿಧಾನಸಭೆ ಚುನಾವಣೆ

ಡಿಎಂಕೆ ನಾಯಕ ಎಂಕೆ ಸ್ಟಾಲಿನ್​ ಅವರು ತಿರುವಣ್ಣಾಮಲೈ ಜಿಲ್ಲೆಯ ಅಭ್ಯರ್ಥಿಗಳನ್ನು ಬೆಂಬಲಿಸಿ ಇಂದು (ಮಾರ್ಚ್ 25) ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಐಟಿ ದಾಳಿ ನಡೆಸಿದ್ದು ಕ್ಷೇತ್ರದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

E.V. velu
E.V. velu

By

Published : Mar 25, 2021, 1:43 PM IST

ಚೆನ್ನೈ:ತಿರುವಣ್ಣಾಮಲೈ ಕ್ಷೇತ್ರದ ಡಿಎಂಕೆಯ ಹಾಲಿ ಶಾಸಕ ಹಾಗೂ ಚುನಾವಣೆ ಅಭ್ಯರ್ಥಿ ಇವಿ ವೇಲು ಅವರಿಗೆ ಸಂಬಂಧಿಸಿದ ಮನೆ ಮತ್ತು ಕಚೇರಿ ಸೇರಿ ಹತ್ತು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

10 ಕಡೆ ದಾಳಿ ನಡೆಸಿ ದಾಖಲೆಗಳ ಶೋಧನೆಯನ್ನು ಆದಾಯ ತೆರಿಗೆ ನಿರ್ಗಮನ ಅಧಿಕಾರಿಗಳು ನಡೆಸುತ್ತಿದ್ದಾರೆ. ಇ.ವಿ. ವೇಲು ಅವರು ತಿರುವಣ್ಣಾಮಲೈ ಕ್ಷೇತ್ರದಲ್ಲಿ ಡಿಎಂಕೆಯ ಈಗಿನ ಶಾಸಕರಾಗಿ ಕುಳಿತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ: ಹಿರಿಯ ನಾಗರಿಕರಿಗೆ ಅಂಚೆ ಮತದಾನ ಕೋರಿ ಅರ್ಜಿ: ವಿಚಾರಣೆಗೆ ನಿರಾಕರಿಸಿದ ಹೈಕೋರ್ಟ್

ಇ.ವಿ ವೇಲು ಡಿಎಂಕೆ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದು, ಕಳೆದ ಕೆಲವು ದಿನಗಳಿಂದ ಕ್ಷೇತ್ರದ ಜನರೊಂದಿಗೆ ಪ್ರಚಾರ ನಡೆಸುತ್ತಿದ್ದರು.

ಡಿಎಂಕೆ ನಾಯಕ ಎಂಕೆ ಸ್ಟಾಲಿನ್​ ಅವರು ತಿರುವಣ್ಣಾಮಲೈ ಜಿಲ್ಲೆಯ ಅಭ್ಯರ್ಥಿಗಳನ್ನು ಬೆಂಬಲಿಸಿ ಇಂದು (ಮಾರ್ಚ್ 25) ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಐಟಿ ದಾಳಿ ನಡೆಸಿದ್ದು ಕ್ಷೇತ್ರದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ABOUT THE AUTHOR

...view details