ಕರ್ನಾಟಕ

karnataka

ETV Bharat / business

ಮೂಲ ತೆರಿಗೆ ಕಡಿತ 'ಫಾರಂ 16' ಪರಿಷ್ಕರಣೆ... ಇನ್ನು ಮುಂದೆ ತೆರಿಗೆ ಪಾವತಿ ಇನ್ನಷ್ಟು ಸುಲಭ

ಆದಾಯ ತೆರಿಗೆದಾರರು 2018-19ನೇ ಹಣಕಾಸು ವರ್ಷದ ಆದಾಯ ತೆರಿಗೆ ಲೆಕ್ಕ ಪತ್ರವನ್ನು ನೂತನ ಪರಿಷ್ಕೃತ ಅರ್ಜಿ ನಮೂನೆಯಲ್ಲಿಯೇ ಸಲ್ಲಿಸಬೇಕಾಗುತ್ತದೆ ಎಂದು ಐಟಿ ಇಲಾಖೆ ಸೂಚಿಸಿದೆ.

ಸಂಗ್ರಹ ಚಿತ್ರ

By

Published : Apr 17, 2019, 8:12 AM IST

ನವದೆಹಲಿ:ಕೇಂದ್ರ ಆದಾಯ ತೆರಿಗೆ ಇಲಾಖೆಯು ಫಾರಂ (ಅರ್ಜಿ ನಮೂನೆ- 16)ಅನ್ನು ನೂತನವಾಗಿ ಪರಿಷ್ಕರಣೆ ಮಾಡಿದ್ದು, ಪರಿಷ್ಕೃತ ಅರ್ಜಿ ನಮೂನೆ ಮೇ 12ರಿಂದ ಜಾರಿಗೆ ಬರಲಿದೆ.

ಮನೆ ಬಾಡಿಗೆಯಿಂದ ಬರುವ ವರಮಾನ, ವಿವಿಧ ಉಳಿತಾಯ ಯೋಜನೆಗಳಲ್ಲಿನ ತೆರಿಗೆ ಕಡಿತ, ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ, ಬೇರೆ ಮೂಲಗಳಿಂದ ಬರುವ ಆದಾಯ ಹಾಗೂ ವಿವಿಧ ಭತ್ಯೆಗಳನ್ನೂ ಒಳಗೊಂಡು ಇನ್ನು ಕೆಲವು ವಿವರಗಳನ್ನು ಅರ್ಜಿ ನಮೂನೆಯಲ್ಲಿ ಸೇರಿಸಲಾಗಿದೆ.

ಮೂಲ ತೆರಿಗೆ ಕಡಿತ (ಟಿಡಿಎಸ್​) ಆಗಿರುವ ಮಾಹಿತಿಗಳನ್ನು ಒಳಗೊಂಡಿರುವುದು ಫಾರಂ 16 ಆಗಿದೆ. ವಾರ್ಷಿಕ ಲೆಕ್ಕಪತ್ರ ಸಲ್ಲಿಸುವಾಗ ಈ ಮಾಹಿತಿಗಳನ್ನು ನೀಡಬೇಕಾಗುತ್ತದೆ.

ಉದ್ಯೋಗದಾತರು ತೆರಿಗೆ ಇಲಾಖೆಗೆ ನೀಡಬೇಕಿರುವ ಫಾರಂ 24 ಸಹ ಪರಿಷ್ಕರಣೆ ಮಾಡಲಾಗಿದೆ. ನೌಕರರ ಆಸ್ತಿ ಖರೀದಿ ಅಥವಾ ಮನೆ ನಿರ್ಮಾಣಕ್ಕೆ ಬ್ಯಾಂಕೇತರ ಸಂಸ್ಥೆಗಳಿಂದ ಸಾಲ ಪಡೆದಿದ್ದರೆ ಆ ಸಂಸ್ಥೆಯ ಪ್ಯಾನ್ ಮಾಹಿತಿಯನ್ನು ಕಡ್ಡಾಯವಾಗಿ ಒದಗಿಸಬೇಕಾಗುತ್ತದೆ.

For All Latest Updates

TAGGED:

ABOUT THE AUTHOR

...view details