ನವದೆಹಲಿ : ಟಿಡಿಎಸ್ ದರವನ್ನು ಕಂಡು ಹಿಡಿಯುವ ಹೊಸ ಆ್ಯಕ್ಸೆಸ್‌ನ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಿಗೆ ಲಭ್ಯಗೊಳಿಸಿದೆ ಎಂದು ಆದಾಯ ತೆರಿಗೆ ಇಲಾಖೆ ಭಾನುವಾರ ತಿಳಿಸಿದೆ.
ಆದಾಯ ತೆರಿಗೆ ಪಾವತಿಸದಿದ್ದಲ್ಲಿ 20 ಲಕ್ಷ ರೂ.ಗಳಿಗಿಂತ ಹೆಚ್ಚು ನಗದು ಹಿಂಪಡೆಯುವಿಕೆಯ ಮೇಲೆ ಮತ್ತು ತೆರಿಗೆ ಪಾವತಿಸಿದ ಸಂದರ್ಭದಲ್ಲಿ 1 ಕೋಟಿ ರೂ.ಗಿಂತ ಹೆಚ್ಚಿನ ಹಣ ವಿತ್ಡ್ರಾ ಮೇಲೆ TDS(ತೆರಿಗೆಯನ್ನು ಮೂಲದಲ್ಲಿ ಕಡಿತ) ದರ ಅನ್ವಯವಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಈ ಸೌಲಭ್ಯದ ವಿವರಗಳನ್ನು ವಿವರಿಸಿದ ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT), ಟಿಡಿಎಸ್ ಅನ್ವಯವಾಗುವ ದರವನ್ನು ಕಂಡು ಹಿಡಿಯಲು ಹಣವನ್ನು ಹಿಂಪಡೆಯುತ್ತಿರುವ ವ್ಯಕ್ತಿಯ PAN ಈಗ ಬ್ಯಾಂಕ್ ಅಥವಾ ಅಂಚೆ ಕಚೇರಿ ನಮೂದಿಸಬೇಕಾಗುತ್ತದೆ ಎಂದು ಹೇಳಿದೆ.
TDS (ತೆರಿಗೆ ಮೂಲಗಳಲ್ಲಿ ಕಡಿತ) ಎಂದರೇನು? :ತೆರಿಗೆ ಮೂಲಗಳಲ್ಲಿ (TDS) ಕಡಿತ ಎಂದರೆ ಆದಾಯದ ಉತ್ಪಾದನಾ ಹಂತದಲ್ಲಿ ತೆರಿಗೆಯನ್ನು ಕಡಿತಗೊಳಿಸುವ ವ್ಯವಸ್ಥೆಯಾಗಿದೆ. 2019ರ ಕೇಂದ್ರ ಕೇಂದ್ರ ಬಜೆಟ್ನಲ್ಲಿ 1 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯುವವರಿಗೆ ತೆರಿಗೆ ಮೂಲಗಳಲ್ಲಿ ಕಡಿತ ಮಾಡಲು ಸೆಕ್ಷನ್ 194N ಪರಿಚಯಿಸಿತು. ನಗದು ಪಾವತಿಗಳನ್ನು ನಿರುತ್ಸಾಹಗೊಳಿಸಲು ಈ ಕ್ರಮಕೈಗೊಳ್ಳಲಾಗಿದೆ. ಸೆಕ್ಷನ್ 194N ಟಿಡಿಎಸ್ ಕಡಿತಗೊಳಿಸಲು ಬ್ಯಾಂಕ್ಗಳು, ಸಹಕಾರಿ ಬ್ಯಾಂಕ್ಗಳು ಮತ್ತು ಅಂಚೆ ಕಚೇರಿಗಳಿಗೆ ನಿರ್ದೇಶಿಸುತ್ತದೆ.
ನಗದು ಹಿಂಪಡೆಯುವಿಕೆಯು 1 ಕೋಟಿ ರೂ.ಗಿಂತ ಹೆಚ್ಚಿದ್ದರೆ ಟಿಡಿಎಸ್ ಶೇ.2ರಂತೆ ಕಡಿತಗೊಳಿಸಲಾಗುತ್ತದೆ. ಇದು ನಗದು ಹಿಂತೆಗೆದುಕೊಳ್ಳುವ ವ್ಯಕ್ತಿಯು ಆದಾಯ ತೆರಿಗೆ ಪಾವತಿಯಾಗಿದ್ದ ಸಂದರ್ಭದಲ್ಲಿ ಅನ್ವಯವಾಗುತ್ತದೆ. ಇನ್ನೊಂದೆಡೆ ಆದಾಯ ತೆರಿಗೆ ಪಾವತಿ ಮಾಡದೆ, ನಗದು ಹಿಂಪಡೆಯುವಿಕೆಯು 20 ಲಕ್ಷ ರೂ.ಗಳನ್ನು ಮೀರಿದ್ರೆ ಟಿಡಿಎಸ್ ದರ ಶೇ. 2 ಮತ್ತು ಕ್ಯಾಶ್ ವಿದ್ ಡ್ರಾ 1 ಕೋಟಿ ರೂ.ಗಳನ್ನು ಮೀರಿದ್ರೆ ಶೇ. 5ರ ದರದಲ್ಲಿ ತೆರಿಗೆ ಮೂಲದಲ್ಲಿ ಕಡಿತ ಮಾಡಲಾಗುತ್ತದೆ.
ಆದಾಯ ತೆರಿಗೆ ಇಲಾಖೆಯು ಬ್ಯಾಂಕ್ಗಳು ಮತ್ತು ಅಂಚೆ ಕಚೇರಿಗಳಿಗೂ ಈ ಹೊಸ ಕಾರ್ಯವನ್ನು ಆಕ್ಸೆಸ್ ಆಗುವಂತೆ ಮಾಡಿದೆ. ಅದರ ಮೂಲಕ ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ಗಳಲ್ಲೂ ಟಿಡಿಎಸ್ ದರವನ್ನು ಕಂಡು ಹಿಡಿಯಬಹುದು ಎಂದು ಆದಾಯ ತೆರಿಗೆ ಇಲಾಖೆಯ ಅಧಿಕೃತವಾಗಿ ಹೇಳಿಕೆಯಲ್ಲಿ ತಿಳಿಸಿದೆ.