ಕರ್ನಾಟಕ

karnataka

ತೆರಿಗೆ ಉಳಿತಾಯ ಹೂಡಿಕೆಗೆ ಜುಲೈ 31ರವರೆಗೆ ಗಡುವು ವಿಸ್ತರಿಸಿದ ಆದಾಯ ತೆರಿಗೆ ಇಲಾಖೆ

By

Published : Jul 2, 2020, 4:24 PM IST

2019-20ನೇ ಸಾಲಿನ ತೆರಿಗೆ ಉಳಿತಾಯ ಹೂಡಿಕೆಗಳು / ಪಾವತಿಗಳನ್ನು ಜುಲೈ 31, 2020 ರವರೆಗೆ ಮಾಡಬಹುದಾಗಿದೆ ಎಂದು ಐಟಿ ಇಲಾಖೆ ಟ್ವೀಟ್ ಮಾಡಿದೆ.

i-t
i-t

ನವದೆಹಲಿ: ಕೋವಿಡ್-19 ಹಿನ್ನೆಲೆಯಲ್ಲಿ 2019-20ರ ತೆರಿಗೆ ಉಳಿತಾಯ ಪಾವತಿ / ಹೂಡಿಕೆ ಮಾಡುವ ಗಡುವನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ (ಐಟಿ) ಇಲಾಖೆ ಪ್ರಕಟಿಸಿದೆ.

"ನಾವು ಈ ಸಮಯವನ್ನು ಗಮನದಲ್ಲಿಟ್ಟುಕೊಂಡು ಇನ್ನೂ ಹೆಚ್ಚಿನ ಗಡುವನ್ನು ನೀಡುತ್ತೇವೆ. ಈಗ 2019-20ನೇ ಸಾಲಿನ ತೆರಿಗೆ ಉಳಿತಾಯ ಹೂಡಿಕೆಗಳು / ಪಾವತಿಗಳನ್ನು ಜುಲೈ 31, 2020 ರವರೆಗೆ ಮಾಡಬಹುದಾಗಿದೆ. ಇದು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ಐಟಿ ಇಲಾಖೆ ಟ್ವೀಟ್ ಮಾಡಿದೆ.

ಆಧಾರ್​ನೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡುವ ದಿನಾಂಕವನ್ನು ಕಳೆದ ವಾರವೇ ಮಾರ್ಚ್ 31, 2021ಕ್ಕೆ ವಿಸ್ತರಿಸಲಾಗಿದೆ.

ABOUT THE AUTHOR

...view details