ನವದೆಹಲಿ: ವಾಟ್ಸ್ ಆ್ಯಪ್, ಭಾರತದಲ್ಲಿ ತನ್ನ ಮೊದಲ ಬ್ರಾಂಡ್ ಅಭಿಯಾನವನ್ನು ಪ್ರಾರಂಭಿಸಿದ್ದು, ಇದು ಭಾರತೀಯರು ತಮ್ಮ ಸಂಬಂಧಿಕರು, ಸ್ನೇಹಿತರೊಂದಿಗೆ ಪ್ರತಿದಿನ ಹೇಗೆ ಸಂವಹನ ನಡೆಸುತ್ತಾರೆ ಎಂಬುದರ ಕುರಿತ ನೈಜ ಕಥೆಗಳನ್ನು ವಿವರಿಸಲಿದೆ.
'It's Between You'.. ಭಾರತದಲ್ಲಿ ವಾಟ್ಸ್ ಆ್ಯಪ್ನ ಮೊದಲ ಬ್ರಾಂಡ್ ಅಭಿಯಾನ - ಭಾರತದಲ್ಲಿ ವಾಟ್ಸಾಪ್ನ ಮೊದಲ ಬ್ರಾಂಡ್ ಅಭಿಯಾನ
'ಇಟ್ಸ್ ಬಿಟ್ವೀನ್ ಯು' ಎಂಬ ಅಭಿಯಾನವನ್ನು ವಾಟ್ಸಾಪ್ ಭಾರತದಲ್ಲಿ ಪ್ರಾರಂಭಿಸಿದ್ದು, ಇದು ನಿಮ್ಮ ಸಂಭಾಷಣೆಗಳು, ಹಾಸ್ಯಗಳು, ನೆನಪುಗಳನ್ನು ನಿಮ್ಮಲ್ಲೇ ಉಳಿಯಲು ಸಹಕರಿಸುತ್ತದೆ.
ವಾಟ್ಸಾಪ್
'ಇಟ್ಸ್ ಬಿಟ್ವೀನ್ ಯು' ('It's Between You') ಎಂಬ ಅಭಿಯಾನವು ಬಳಕೆದಾರರಿಗೆ ತಮಗೆ ಬೇಕಾದ ವ್ಯಕ್ತಿಗಳೊಂದಿಗಿನ ವ್ಯವಹಾರದ ಜೊತೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ. ಇದು ವಾಟ್ಸ್ ಆ್ಯಪ್ ಬಳಕೆದಾರರ ವೈಯಕ್ತಿಕ ಮಾಹಿತಿಗೆ ಯಾವುದೇ ಹಾನಿಯುಂಟು ಮಾಡುವುದಿಲ್ಲ ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ನಿಮ್ಮ ಸಂಭಾಷಣೆಗಳು, ನೀವು ಮಾಡುವ ಹಾಸ್ಯಗಳು, ನೀವು ಮೆಲುಕು ಹಾಕುವ ನೆನಪುಗಳು ಸದಾ ನಿಮ್ಮಲ್ಲೇ, ನಿಮ್ಮ ನಡುವೆಯೇ ಉಳಿಯಲು ವಾಟ್ಸ್ ಆ್ಯಪ್ ಈ ಪ್ರಯತ್ನ ಮಾಡಿದೆ ಎಂದು ಫೇಸ್‌ಬುಕ್ ಇಂಡಿಯಾದ ಮಾರ್ಕೆಟಿಂಗ್ ನಿರ್ದೇಶಕ ಅವಿನಾಶ್ ಪಂತ್ ಹೇಳಿದ್ದಾರೆ.