ಹೈದರಾಬಾದ್:ಷೇರುಪೇಟೆಯಲ್ಲಿ ಆಗಾಗ ಏರಿಳಿತಗಳು ಕಂಡುಬರುತ್ತವೆ. ಈ ವೇಳೆ ಹೂಡಿಕೆದಾರರು ಹೆಚ್ಚಿನ ಬೆಲೆಗೆ ತಮ್ಮ ಷೇರುಗಳನ್ನು ಮಾರಾಟ ಮಾಡಲು ಬಯಸುತ್ತಾರೆ ಅಥವಾ ಕೆಲವೊಮ್ಮೆ ಮರುಹೂಡಿಕೆ ಮಾಡಲು ಮುಂದಾಗುತ್ತಾರೆ. ಆದರೆ ಹೂಡಿಕೆ ಮಾಡಲು ಅಥವಾ ಹಿಂಪಡೆಯಲು 'ಇದೇ ಸರಿಯಾದ ಸಮಯ' ಎಂದು ಹೇಳಿಕೊಳ್ಳುವಂತಹ ಸ್ಥಿತಿ ಇರುವುದೇ ಇಲ್ಲ. ಕೆಲವು ಸಂದರ್ಭಗಳಲ್ಲಿ ಹೂಡಿಕೆಯನ್ನು ಹಿಂಪಡೆಯಬೇಕಾಗುತ್ತದೆ. ಕಾಲ ಕಾಲಕ್ಕೆ ಹೂಡಿಕೆ ಮಾಡುವ ಮ್ಯೂಚುಯಲ್ ಫಂಡ್ಗಳ ವಿಚಾರದಲ್ಲಿ ಇದು ಅಪ್ಪಟ ಸತ್ಯ.
Mutual Funds investment plans:ಮ್ಯೂಚುಯಲ್ ಫಂಡ್ಗಳ ವಿಚಾರದಲ್ಲಿ SIP ಎಂಬ ವ್ಯವಸ್ಥೆಯಿದೆ. SIP ಅಂದರೆ Systematic Investment Plan(ಯೋಜನಾಬದ್ಧ ಹೂಡಿಕೆ) ಎಂದರ್ಥ ಕನ್ನಡದಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ ಎಂದು ಕರೆಯಲಾಗುತ್ತದೆ. ಇಲ್ಲಿನ ನಿಯಮಿತವಾಗಿ ಅಂದರೆ ಕಾಲಕಾಲಕ್ಕೆ ಸಣ್ಣ ಮೊತ್ತವನ್ನು ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡಬಹುದಾಗಿದೆ.
ಸಣ್ಣ ಮೊತ್ತವಾದ ಕಾರಣ ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ಏರಿಳಿತವಿದ್ದರೂ ಕೂಡಾ, ನೀವು ಹೂಡಿಕೆ ಮಾಡಬಹುದು. ಒಂದು ವೇಳೆ ನಿಮಗೆ ಹಣ ಬೇಕಾದರೆ, ಆ ಹಣವನ್ನು ಈಕ್ವಿಟಿ ಫಂಡ್‌ಗಳಿಂದ ತೆಗೆದುಕೊಳ್ಳಬಹುದು. ಒಮ್ಮೊಮ್ಮೆ ಹಣವನ್ನು ಲಿಕ್ವಿಡ್ ಫಂಡ್ಗಳಾಗಿ ಪರಿವರ್ತನೆ ಮಾಡಬಹುದು ಅಥವಾ ಬ್ಯಾಂಕಿನಲ್ಲಿ ಫ್ಲೆಕ್ಸಿ ಠೇವಣಿಯನ್ನಾಗಿ ಆ ಹಣವನ್ನು ಪರಿವರ್ತನೆ ಮಾಡಿಕೊಳ್ಳಬಹುದು.
ಒಂದು ವೇಳೆ ನಿಮಗೆ ಮ್ಯೂಚುಯಲ್ ಫಂಡ್‌ಗಳಿಂದ ಹಣ ಬೇಕಾದರೆ ಡಿವಿಡೆಂಟ್ ಆಗಿ ಪರಿವರ್ತಿಸಿ ಪೂರ್ಣ ಹಣ ತೆಗೆದುಕೊಳ್ಳುತ್ತೀರಿ. ಅದರ ಬದಲಿಗೆ ನಿಯಮಿತವಾಗಿ ಆಗಾಗ ಸ್ವಲ್ಪ ಸ್ವಲ್ಪವೇ ಹಣ ಪಡೆದುಕೊಂಡರೆ, ತೆರಿಗೆ ಹೊರೆ ಕಡಿಮೆ ಮಾಡಿಕೊಳ್ಳಬಹುದು.