ಹೈದರಾಬಾದ್:ಜೀವ ವಿಮಾ ಪಾಲಿಸಿಯು ಅಪಘಾತ, ಗಂಭೀರ ಅನಾರೋಗ್ಯ ಅಥವಾ ಮಾರಣಾಂತಿಕ ಕಾಯಿಲೆ ಮತ್ತು ವೃದ್ಧಾಪ್ಯದ ವೇಳೆ ಆರ್ಥಿಕ ರಕ್ಷಣೆ ನೀಡುವ ಸಾಧನವಾಗಿದೆ. ಕಾಲಕಾಲಕ್ಕೆ ಪ್ರೀಮಿಯಂಗಳನ್ನು ಪಾವತಿಸುವವರೆಗೆ ಇದು ನಿರ್ದಿಷ್ಟ ಅವಧಿಗೆ ಜೀವನಕ್ಕೆ ರಕ್ಷಣೆಯನ್ನು ನೀಡುವ ಸೌಲಭ್ಯವಾಗಿದೆ.
ವಿಮಾದಾರನು ತನ್ನ ಮರಣಾನಂತರ ಅವರ ಕುಟುಂಬ, ಪ್ರೀತಿಪಾತ್ರರಿಗೆ ಹಣಕಾಸಿನ ರಕ್ಷಣೆ ನೀಡುವುದನ್ನು ಈ ಜೀವ ವಿಮಾ ಪಾಲಿಸಿ ಖಚಿತಪಡಿಸುತ್ತದೆ. ಹೀಗೆ ನಿಮ್ಮ ಅಗತ್ಯಗಳಿಗೆ ಸೂಕ್ತವಾದ ವಿಮೆಯನ್ನು ನೀವು ಹೊಂದುವ ಮೂಲಕ ಜೀವನ ಭದ್ರತೆಯನ್ನು ಪಡೆದುಕೊಳ್ಳಬಹುದಾಗಿದೆ.
ನೀವು ವಿಮೆ ಮಾಡಿಸಿದರೆ ಮಾತ್ರ ಸಾಲದು, ಅದಕ್ಕೆ ಪೂರಕವಾಗಿ ನೀಡಲಾದ ದಾಖಲೆಗಳು ವಿಶ್ವಾಸಾರ್ಹ ಮತ್ತು ನಿಖರವಾಗಿರಬೇಕು. ಆಗ ಮಾತ್ರ ವಿಮೆಯ ಸೌಲಭ್ಯವನ್ನು ಕಾಲಾವಧಿಯಲ್ಲಿ ಪಡೆದುಕೊಳ್ಳಲು ಸಾಧ್ಯ. ಹಾಗಾದರೆ, ವಿಮೆಯನ್ನು ಮಾಡಿಸುವಾಗ ನಾವು ಏನು ಮಾಡಬೇಕು, ಯಾವೆಲ್ಲಾ ಪೂರಕ ದಾಖಲೆಗಳನ್ನು ಒದಗಿಸಬೇಕು ಮತ್ತು ಪಾಲಿಸಿಯನ್ನು ಹೇಗೆ ಕ್ಲೈಮ್ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಯೋಣ..
ವಿಮಾ ಪಾಲಿಸಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ
ವಿಮಾ ಪಾಲಿಸಿಯಲ್ಲಿ ಹಲವಾರು ವಿಧಗಳಿವೆ. ಅವುಗಳು ನಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಸಿಕೊಳ್ಳಬಹುದು. ನಾವು ತೆಗೆದುಕೊಳ್ಳುವ ಪಾಲಿಸಿ ಪ್ರಕಾರ ಯಾವುದು? ಪರಿಹಾರ ಯಾವಾಗ ಸಿಗುತ್ತದೆ ? ಎಂಬ ಅಂಶಗಳನ್ನು ಮೊದಲು ಸರಿಯಾಗಿ ಅರಿತಿರಬೇಕು. ವಿಮಾ ಹಣವನ್ನು ಕ್ಲೈಮ್ ಮಾಡಲು, ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಕಾಲಕಾಲಕ್ಕೆ ವಿಮಾ ಕಂಪನಿಗೆ ತಿಳಿಸಬೇಕು. ಎಲ್ಲಾ ಪ್ರೀಮಿಯಂಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು. ಪಾಲಿಸಿಗೆ ನೀವು ನೀಡಿದ ಮಾಹಿತಿ ಸುಳ್ಳಾಗಿರಬಾರದು. ಆಗ ಮಾತ್ರ ಪಾಲಿಸಿ ಕ್ಲೈಮ್ಗೆ ಯಾವುದೇ ಅಡ್ಡಿಯಾಗದು.
ವಿಮಾ ಪಾಲಿಸಿಯಲ್ಲಿ ಪಾರದರ್ಶಕತೆ ಇರಲಿ
ಪಾಲಿಸಿಯನ್ನು ಮಾಡಿಸುವ ಮೊದಲ ಉದ್ದೇಶವೆಂದರೆ ನಮಗೆ ಹಣದ ಅವಶ್ಯಕತೆ ಇದ್ದಾಗ ಪರಿಹಾರ ಪಡೆಯುವುದು. ಆದ್ದರಿಂದ, ಪಾಲಿಸಿಯನ್ನು ತೆಗೆದುಕೊಳ್ಳುವಾಗ ವಿಮಾ ಕಂಪನಿಗೆ ಒದಗಿಸಲಾದ ಪ್ರತಿಯೊಂದು ಮಾಹಿತಿಯೂ ನಿಖರ ಮತ್ತು ಸ್ಪಷ್ಟವಾಗಿರಲೇಬೇಕು. ಆಗ ಮಾತ್ರ ಪಾಲಿಸಿಯ ಅವಧಿ ಮುಗಿದ ನಂತರ ಅಥವಾ ಪಾಲಿಸಿದಾರನ ಅಕಾಲಿಕ ಮರಣದ ಸಂದರ್ಭದಲ್ಲಿ ಸುಲಭವಾಗಿ ಪರಿಹಾರವನ್ನು ಪಡೆದುಕೊಳ್ಳಬಹುದು.
ಪಾಲಿಸಿದಾರರು ಒದಗಿಸಿದ ಮಾಹಿತಿಯ ಆಧಾರದ ಮೇಲೆ ಪಾಲಿಸಿಯನ್ನು ನೀಡಲಾಗಿರುತ್ತದೆ. ವಿಮಾ ಕಂಪನಿಯು ವಿಮಾದಾರನ ಆದಾಯ, ವಯಸ್ಸು ಮತ್ತು ಇತರ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಪಾಲಿಸಿ ನೀಡಿರುತ್ತದೆ. ಒಂದು ವೇಳೆ ಪಾಲಿಸಿದಾರರು ತಪ್ಪು ವಿವರಗಳನ್ನು ನೀಡಿದಾಗ ಕ್ಲೈಮ್ನ ಸಂದರ್ಭದಲ್ಲಿ ಮಾಹಿತಿ ಸರಿಹೊಂದದೇ ನೀವು ಪರಿಹಾರವನ್ನು ಕಳೆದುಕೊಳ್ಳಬೇಕಾದೀತು.
ಆರೋಗ್ಯದ ಮಾಹಿತಿ ಕರಾರುವಕ್ಕಾಗಿರಲಿ