ಕರ್ನಾಟಕ

karnataka

ETV Bharat / business

ಪ್ಯಾನ್ ಕಾರ್ಡ್-ಆಧಾರ್‌ ಲಿಂಕ್​ ಮಾಡಲು ಐದೇ ದಿನ ಬಾಕಿ

ಪ್ಯಾನ್ ಕಾರ್ಡ್-ಆಧಾರ್‌ ಲಿಂಕ್ ಮಾಡಲು ಕೊನೆಯ ದಿನಾಂಕ ಮಾರ್ಚ್ 31. ಈ ದಿನಾಂಕದಂದು ಲಿಂಕ್ ಮಾಡಲು ವಿಫಲವಾದರೆ 1000 ರೂ. ಶುಲ್ಕ ವಿಧಿಸಲಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ 2021ರ ಹಣಕಾಸು ಮಸೂದೆಯಲ್ಲಿ 234 ಹೆಚ್ ಎಂಬ ಹೊಸ ವಿಭಾಗವನ್ನು ಪರಿಚಯಿಸಿದೆ. ಈ ಲಿಂಕ್ ಮಾಡದವರು ಈ ತಿಂಗಳ ಅಂತ್ಯದೊಳಗೆ ಲಿಂಕ್ ಮಾಡಲು ಸೂಚಿಸಲಾಗಿದೆ.

ಆಧಾರ್​-ಪ್ಯಾನ್ ಕಾರ್ಡ್​ ಜೋಡಣೆ
ಆಧಾರ್​-ಪ್ಯಾನ್ ಕಾರ್ಡ್​ ಜೋಡಣೆ

By

Published : Mar 27, 2021, 3:35 PM IST

ನವದೆಹಲಿ:ಪ್ಯಾನ್ ಕಾರ್ಡ್-ಆಧಾರ್‌ ಲಿಂಕ್ ಮಾಡಲು ಕೊನೆಯ ದಿನಾಂಕ ಮಾರ್ಚ್ 31. ಈ ದಿನಾಂಕದಂದು ಲಿಂಕ್ ಮಾಡಲು ವಿಫಲವಾದರೆ 1000 ರೂ. ಶುಲ್ಕ ವಿಧಿಸಲಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ 2021ರ ಹಣಕಾಸು ಮಸೂದೆಯಲ್ಲಿ 234 ಹೆಚ್ ಎಂಬ ಹೊಸ ವಿಭಾಗವನ್ನು ಪರಿಚಯಿಸಿದೆ. ಈ ಲಿಂಕ್ ಮಾಡದವರು ಈ ತಿಂಗಳ ಅಂತ್ಯದೊಳಗೆ ಲಿಂಕ್ ಮಾಡಲು ಸೂಚಿಸಲಾಗಿದೆ. ಪ್ಯಾನ್ ಕಾರ್ಡ್‌ನೊಂದಿಗೆ, ಆಧಾರ್ ಅನ್ನು ಹಂತ ಹಂತವಾಗಿ ಜೋಡಿಸುವ ಪ್ರಕ್ರಿಯೆ ಇಲ್ಲಿದೆ.

1. ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ತೆರೆಯಿರಿ

2. ಮೊದಲ ಬಾರಿಗೆ ಲಾಗಿನ್ ಬಳಕೆದಾರರು ನೋಂದಾಯಿಸಿಕೊಳ್ಳಬೇಕು. ನಿಮ್ಮ ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ: PAN) ನಿಮ್ಮ ಬಳಕೆದಾರ ID ಆಗಿರುತ್ತದೆ.

3. ಬಳಕೆದಾರರ ಐಡಿ, ಪಾಸ್‌ವರ್ಡ್, ಜನ್ಮ ದಿನಾಂಕ ನಮೂದಿಸಿ ಲಾಗಿನ್ ಆಗಿ

4. ಆಧಾರ್-ಪ್ಯಾನ್ ಲಿಂಕ್‌ಗೆ ಪಾಪ್-ಅಪ್ ವಿಂಡೋ ತೆರೆಯುತ್ತದೆ

ಸರಳವಾಗಿ ಆಧಾರ್​-ಪ್ಯಾನ್ ಕಾರ್ಡ್​ ಜೋಡಣೆ

5. ಪ್ಯಾನ್ ಕಾರ್ಡ್‌ನಲ್ಲಿರುವ ವಿವರಗಳ ಪ್ರಕಾರ ಹೆಸರು, ಜನ್ಮ ದಿನಾಂಕ, ಲಿಂಗ ಮುಂತಾದ ಮಾಹಿತಿಗಳು ಕಾಣಿಸುತ್ತವೆ

6. ಪರದೆಯ ಮೇಲೆ ಗೋಚರಿಸುವ ಪ್ಯಾನ್ ಕಾರ್ಡ್ ವಿವರಗಳನ್ನು ಆಧಾರದಲ್ಲಿ ನಮೂದಿಸಿದ ವಿವರಗಳೊಂದಿಗೆ ಪರಿಶೀಲಿಸಬೇಕು. ವಿವರಗಳಲ್ಲಿ ಯಾವುದೇ ವ್ಯತ್ಯಾಸಗಳಿದ್ದರೆ, ಇವೆರಡನ್ನು ಒಂದೇ ಎಂದು ಸರಿಪಡಿಸಬೇಕು

ಸರಳವಾಗಿ ಆಧಾರ್​-ಪ್ಯಾನ್ ಕಾರ್ಡ್​ ಜೋಡಣೆ

7. ವಿವರಗಳು ಹೊಂದಿಕೆಯಾದರೆ, ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು 'Now link' ಬಟನ್ ಕ್ಲಿಕ್ ಮಾಡಿ

8. ನಿಮ್ಮ ಆಧಾರ್ ಮತ್ತು ಪ್ಯಾನ್ ಅನ್ನು ನೀವು ಯಶಸ್ವಿಯಾಗಿ ಲಿಂಕ್ ಆಗಿದೆ ಎಂಬುದನ್ನು ತಿಳಿಸುವ ಸಂದೇಶವು ಪಾಪ್-ಅಪ್ ವಿಂಡೋದೊಂದಿಗೆ ಕಾಣಿಸುತ್ತದೆ

9. ಮುಖಪುಟದಲ್ಲಿ ಗೋಚರಿಸುವ 'ಲಿಂಕ್ ಆಧಾರ್' ಅನ್ನು ಕ್ಲಿಕ್ ಮಾಡುವುದರ ಮೂಲಕ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಅನ್ನು ನೇರವಾಗಿ ಲಿಂಕ್ ಮಾಡಬಹುದು

10. https://www.utiitsl.com/ ಅಥವಾ https://www.egov-nsdl.co.in/ ಗೆ ಬೇಟಿ ನೀಡಿ

ABOUT THE AUTHOR

...view details