ಕರ್ನಾಟಕ

karnataka

ETV Bharat / business

ನಿಮ್ಮ ಫೋನ್ ಕಳೆದು ಹೋಯಿತೆ?: Google Pay ಸ್ಥಗಿತಗೊಳಿಸಲು ಹೀಗೆ ಮಾಡಿ!

ನೀವು ನಿಮ್ಮ ಫೋನ್​ನಲ್ಲಿ ಹಣ ವರ್ಗಾವಣೆ ಗೂಗಲ್ ಪೇ ಬಳಸುತ್ತಿದ್ದೀರಾ?. ಒಂದು ವೇಳೆ ನಿಮ್ಮ ಫೋನ್ ಕಳೆದು ಹೋದರೆ?. ಯಾರಾದರೂ ಕದ್ದರೆ? ನಿಮ್ಮ ಖಾತೆಯಲ್ಲಿ ಹಣ ಸುರಕ್ಷಿತವಾಗಿರುವುದು ಸ್ವಲ್ಪ ಸಂದೇಹ. ಫೋನ್ ಕಳೆದು ಹೋದಾಗ ಗೂಗಲ್ ಪೇ ಖಾತೆಯನ್ನು ಸ್ಥಗಿತಗೊಳಿಸುವ ಮೂಲಕ ನಿಮ್ಮ ಹಣವನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು. ಅದು ಹೇಗೆ? ನೋಡೋಣ ಬನ್ನಿ

how-to-block-google-pay-account-when-phone-is-lost
ನಿಮ್ಮ ಫೋನ್ ಕಳೆದುಹೋಯಿತೆ?: Google Pay ಸ್ಥಗಿತಗೊಳಿಸಲು ಹೀಗೆ ಮಾಡಿ

By

Published : Nov 24, 2021, 12:31 PM IST

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ಹಣ ವರ್ಗಾವಣೆಗೆ ತಮ್ಮ ಸ್ಮಾರ್ಟ್​ಫೋನ್​ಗಳಲ್ಲಿ ಗೂಗಲ್ ಪೇ ಬಳಸುತ್ತಿದ್ದಾರೆ. ಒಂದು ವೇಳೆ ಫೋನ್ ಕಳೆದು ಹೋದರೆ ಅಥವಾ ಕದಿಯಲ್ಪಟ್ಟರೆ ಗೂಗಲ್ ಪೇ ಮೂಲಕ ಹಣ ಕದಿಯಬಹುದೆಂಬ ಆತಂಕ ಇದ್ದೇ ಇರುತ್ತದೆ. ಈ ವೇಳೆ ಗೂಗಲ್ ಪೇ ಅನ್ನು ಸ್ಥಗಿತಗೊಳಿಸುವ ಮೂಲಕ ಹಣ ಸುರಕ್ಷಿತವಾಗಿರಿಸಿಕೊಳ್ಳಬಹುದು.

ಫೋನ್ ಕಳೆದು ಹೋದ ತಕ್ಷಣ ಬೇರೆ ಫೋನ್ ಅಥವಾ ಕಂಪ್ಯೂಟರ್​ನಿಂದ ಗೂಗಲ್ ಪೇ ಅನ್ನು ಬ್ಲಾಕ್ ಮಾಡಬಹುದು. ಅದಕ್ಕಾಗಿ ಮಾಡಬೇಕಾಗಿರುವುದು ಇಷ್ಟೇ. ಮೊದಲಿಗೆ android.com/find ವೆಬ್​ಸೈಟ್​ಗೆ ಭೇಟಿ ಕೊಟ್ಟು, ಗೂಗಲ್ ಖಾತೆಯ (ಜಿ-ಮೇಲ್) ಮೂಲಕ ಲಾಗಿನ್ ಆಗಿ. ಲಾಗಿನ್ ಆದ ತಕ್ಷಣ ಎಡಭಾಗದಲ್ಲಿ ನಿಮ್ಮ ಗೂಗಲ್ ಅಕೌಂಟ್​ನೊಂದಿಗೆ ಬಳಕೆಯಾಗುತ್ತಿರುವ, ಫೋನ್, ಆ್ಯಪ್ ಅಥವಾ ವೆಬ್​ಸೈಟ್​​ಗಳು ಕಾಣುತ್ತವೆ.

ಇಲ್ಲಿ ಕಾಣಸಿಗುವ ಡೇಟಾ ಎರೇಸ್ (ಮಾಹಿತಿ ಅಳಿಸಿಹಾಕುವ) ಫೀಚರ್ ಅನ್ನು ಆಯ್ಕೆ ಮಾಡಿಕೊಂಡರೆ, ಫೋನ್​ನಲ್ಲಿರುವ ಡೇಟಾ ಎಲ್ಲವನ್ನೂ ಅಳಿಸಿಹಾಕಬಹುದು. ಬೇರೊಬ್ಬರು ನಿಮ್ಮ ಮೊಬೈಲ್​ನಿಂದ ಗೂಗಲ್ ಪೇ ಬಳಸಲು ಈ ವೇಳೆ ಸಾಧ್ಯವಾಗುವುದಿಲ್ಲ.

ಕಸ್ಟಮರ್ ಕೇರ್ ಮೂಲಕ: ನಿಮ್ಮ ಫೋನ್ ಕಳೆದು ಹೋದ ತಕ್ಷಣ ಕಸ್ಟಮರ್ ಕೇರ್​ಗೆ ಕರೆ ಮಾಡಿಯೂ ನೀವು ಗೂಗಲ್ ಪೇ ಖಾತೆಯನ್ನು ಸ್ಥಗಿತಗೊಳಿಸಬಹುದು. ಮೊದಲಿಗೆ 18004190157 ಕರೆ ಮಾಡಿ, ಧ್ವನಿಮುದ್ರಿತ ಕರೆಯಲ್ಲಿ ಕೊನೆಯಲ್ಲಿ ಬರುವ Other issues ಆಯ್ಕೆ ಮಾಡಿಕೊಳ್ಳಬೇಕು. ನಂತರ ಕಸ್ಟಮರ್ ಕೇರ್ ಸರ್ವೀಸ್ ಏಜೆಂಟ್​ಗೆ ಕರೆ ಕನೆಕ್ಟ್ ಆಗುತ್ತದೆ. ಈ ವೇಳೆ, ಅವರ ಮೂಲಕ ಗೂಗಲ್ ಪೇ ಬ್ಲಾಕ್ ಮಾಡಬಹುದಾಗಿದೆ.

ಇದನ್ನೂ ಓದಿ:S-400 ಖರೀದಿ ವಿಚಾರದಲ್ಲಿ ಭಾರತಕ್ಕೆ ಇನ್ನೂ ಕಾಟ್ಸಾ ಕಾಯ್ದೆಯಿಂದ ರಿಯಾಯಿತಿ ನೀಡಿಲ್ಲ: ಅಮೆರಿಕ ಸ್ಪಷ್ಟನೆ

ABOUT THE AUTHOR

...view details