ನವದೆಹಲಿ:ಕೊರೊನಾ ವಿಶ್ವದಾದ್ಯಂತ ತಳಮಳ ಸೃಷ್ಟಿಸಿದೆ. ಎಲ್ಲಾ ರಾಷ್ಟ್ರಗಳ ಆರ್ಥಿಕತೆ ಸಂಕಷ್ಟದಲ್ಲಿದೆ. ಬಹುಪಾಲು ವ್ಯವಹಾರಗಳು ಹಾಗೂ ಕಾರ್ಖಾನೆಗಳನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ಅರ್ಥಿಕತೆ ಕುಂಠಿತಗೊಂಡಿದೆ. ತುಂಬಾ ಕಂಪನಿಗಳು ತಮ್ಮ ನೌಕರರಿಗೆ ರಜೆಗಳನ್ನು ಘೋಷಣೆ ಮಾಡಿವೆ. ವೇತನ ರಹಿತ ರಜೆಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡುತ್ತಿವೆ. ಯಾವ್ಯಾವ ರಾಷ್ಟ್ರಗಳಲ್ಲಿ ಎಂತಹ ಪರಿಸ್ಥಿತಿಯಿದೆ ಇಲ್ಲಿದೆ ಫುಲ್ ಡಿಟೇಲ್ಸ್.
ಇಂಗ್ಲೆಂಡ್
ಈ ರಾಷ್ಟ್ರದ ಉದ್ಯೋಗಿಗಳಿಗೆ ಕೆಲವು ಅನುದಾನಗಳನ್ನು ಬಿಡುಗಡೆ ಮಾಡಿದೆ. ತಾತ್ಕಾಲಿಕ ರಜೆಗಳನ್ನು ನೀಡಿ ಶೇಕಡಾ 80ರಷ್ಟು ವೇತನ ಪಾವತಿ ಮಾಡಲು ಕ್ರಮ ಕೈಗೊಂಡಿದೆ. ಜೊತೆಗೆ ಮಾರ್ಚ್ ಆರಂಭದಲ್ಲಿ ಉದ್ಯೋಗ ಸ್ವಾಧೀನ ಯೋಜನೆ ಜಾರಿಗೊಳಿಸಿ ಪ್ರತಿ ತಿಂಗಳಿಗೆ ರಜೆಯಲ್ಲಿರುವ ಉದ್ಯೋಗಿಗೆ ಎರಡೂವರೆ ಸಾವಿರ ಫೌಂಡ್ಗಳನ್ನು ನೀಡಲು ಮುಂದಾಗಿದೆ.
ಅಮೆರಿಕ
ಕೊರೊನಾ ವಿರುದ್ಧ ಹೋರಾಡಲು ಅಮೆರಿಕಾ ಎರಡು ಟ್ರಿಲಿಯನ್ ಡಾಲರ್ಗಳ ಪ್ಯಾಕೇಜ್ ಅನ್ನು ಬಿಡುಗಡೆ ಮಾಡಿದೆ. ಈ ಪ್ಯಾಕೇಜ್ನ ಹಣದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ವೇತನ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ.
ಫ್ರಾನ್ಸ್