ನವದೆಹಲಿ:ಹೋಂಡಾ ಕಾರ್ಸ್ ತನ್ನ ಸೆಡಾನ್ ಕಾರು ಹೋಂಡಾ ಅಮೇಜ್ನ 2021 ಮಾಡೆಲ್ ಹೋಂಡಾ ಅಮೇಜ್-2021 ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಆರಂಭಿಕ ಎಕ್ಸ್ ಶೋರೂಂ ಬೆಲೆ ರೂ 6.32 ಲಕ್ಷ ರೂ. ಆಗಿದೆ.
ಇದರ ಉನ್ನತ ರೂಪಾಂತರದ ಎಕ್ಸ್ ಶೋರೂಂ ಬೆಲೆ 11.15 ಲಕ್ಷ ರೂ. ಎಂದು ನಿಗದಿಪಡಿಸಲಾಗಿದೆ. ಈ ಕಾರಿನ ಬುಕ್ಕಿಂಗ್ ಕೂಡ ಆರಂಭವಾಗಿದ್ದು, ಒಟ್ಟು 5 ಬಣ್ಣದ ವೇರಿಯಂಟ್ಗಳಲ್ಲಿ ಇದು ಲಭ್ಯ ಇರಲಿದೆ.
ಏನೇನು ಪೀಚರ್ಸ್ ಇದರಲ್ಲಿವೆ
ಹೊಸ ಹೋಂಡಾ ಅಮೇಜ್ 2021 ಕಾರನ್ನು ಪೆಟ್ರೋಲ್ ಇಂಜಿನ್ ಮತ್ತು ಡೀಸೆಲ್ ಇಂಜಿನ್ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕಾರನ್ನು ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ (ಮ್ಯಾನುಯಲ್) - New AMAZE VX, New AMAZE S ಮತ್ತು New AMAZE E. ಪೆಟ್ರೋಲ್ ರೂಪಾಂತರವು 1.2 ಲೀಟರ್ i-VTEC ಇಂಜಿನ್ ಹೊಂದಿದೆ. ಇದರ ಮೈಲೇಜ್ ಪ್ರತಿ ಕಿಲೋಮೀಟರಿಗೆ 18.6 ಕಿಲೋಮೀಟರ್. ಡೀಸೆಲ್ ರೂಪಾಂತರವು 1.5-ಲೀಟರ್ i-DTEC ಎಂಜಿನ್ ಹೊಂದಿದೆ. ಇದರ ಮೈಲೇಜ್ ಪ್ರತಿ ಕಿಲೋಮೀಟರಿಗೆ 24.7 ಕಿಲೋಮೀಟರ್. ಈ ಹೊಸ ಮಾದರಿಯ ಕಾರು ಪ್ಲಾಟಿನಂ ವೈಟ್ ಪರ್ಲ್, ರೆಡಿಯಂಟ್ ರೆಡ್, ಮಿಟಿಯೋರೈಡ್ ಗ್ರೇ, ಲುನಾರ್ ಸಿಲ್ವರ್ ಹಾಗೂ ಗೋಲ್ಡನ್ ಬ್ರೌನ್ ನಲ್ಲಿ ಲಭ್ಯವಿದೆ.
ಎಲ್ಇಡಿ ಪೊಸಿಶನ್ಸ್ ಹ್ಯಾಲೊಜೆನ್ ಹೆಡ್ ಲ್ಯಾಂಪ್ಸ್, ಎಲ್ಇಡಿ ರಿಯರ್ ಕಾಂಬಿನೇಷನ್ ಲ್ಯಾಂಪ್ಸ್, ಎಲ್ಇಡಿ ಟರ್ನ್ ಇಂಡಿಕೇಟರ್ ಆನ್ ಡೋರ್ ಮಿರರ್ಸ್, ಬಂಪರ್ ವಿತ್ ಆರ್ ಆರ್ ರಿಫ್ಲೆಕ್ಟರ್, ಕ್ರೋಮ್ ಇನ್ಸೈಡ್ ಡೋರ್ ಹ್ಯಾಂಡಲ್ಸ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್, ಟಿಲ್ಟ್ ಸ್ಟೀರಿಂಗ್ ಈ ಕಾರು ಒಳಗೊಂಡಿರಲಿದೆ.