ಕರ್ನಾಟಕ

karnataka

ETV Bharat / business

50 ರೂ.ಗೆ ಬಂದ ಪ್ಲಾಟ್​​ಫಾರ್ಮ್​ ಟಿಕೆಟ್​ ದರ: ಬೆಲೆ ಹೆಚ್ಚಳಕ್ಕೆ ರೈಲ್ವೆ ಇಲಾಖೆ ಹೇಳುವುದು ಹೀಗೆ

ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಿಸುವುದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ (ಡಿಆರ್‌ಎಂ) ಜವಾಬ್ದಾರಿಯಾಗಿದೆ. ಇದು ಪ್ರಯಾಣಿಕರ ಸುರಕ್ಷತೆ ಮತ್ತು ನಿಲ್ದಾಣಗಳಲ್ಲಿ ಜನದಟ್ಟಣೆ ತಡೆಗಟ್ಟಲು ರೈಲ್ವೆ ಆಡಳಿತವು ಕೈಗೊಂಡ ತಾತ್ಕಾಲಿಕ ಕ್ರಮವಾಗಿದೆ ಎಂದು ಸ್ಪಷ್ಟೀಕರಣ ನೀಡಿ ಪ್ರಕಟಣೆ ಬಿಡುಗಡೆ ಮಾಡಿದೆ.

platform ticket
platform ticket

By

Published : Mar 5, 2021, 12:37 PM IST

Updated : Mar 5, 2021, 12:50 PM IST

ನವದೆಹಲಿ: ಲೀಟರ್​ ಪೆಟ್ರೋಲ್​ ದರ ಕೆಲವು ನಗರಗಳಲ್ಲಿ ನೂರು ರೂಪಾಯಿ ಗಡಿ ದಾಟಿದ್ದಕ್ಕೆ ಜನರು ಕೋಪ ತಣಿಯುವ ಮೊದಲೇ ಕೆಲವು ರೈಲ್ವೆ ಪ್ಲಾಟ್​​​ಫಾರ್ಮ್​ ಟಿಕೆಟ್​​​ ದರ ಐವತ್ತು ರೂಪಾಯಿಯಷ್ಟಾಗಿದೆ. ಟಿಕೆಟ್​ ಬೆಲೆ ಏರಿಕೆಗೆ ರೈಲ್ವೆ ಸಚಿವಾಲಯ ಸ್ಪಷ್ಟನೆ ನೀಡಿದೆ.

ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ನಿಲ್ದಾಣಗಳಲ್ಲಿ ಜನದಟ್ಟಣೆ ತಡೆಯಲು ಪ್ಲಾಟ್‌ಫಾರ್ಮ್ ಟಿಕೆಟ್ ದರ ಹೆಚ್ಚಳ ತಾತ್ಕಾಲಿಕ ಕ್ರಮ ಎಂದು ರೈಲ್ವೆ ಸಚಿವಾಲಯ ಹೇಳಿದೆ.

ಭಾರತೀಯ ರೈಲ್ವೆ ಅಧಿಸೂಚನೆಯಲ್ಲಿ ಹೆಚ್ಚಿನ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ದರ ಹೆಚ್ಚಳ ಘೋಷಿಸಿದೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ರೈಲ್ವೆ ಹೊಸ ಅಧಿಸೂಚನೆಯಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ಬೆಲೆ 10 ರೂ.ಯಿಂದ 30 ರೂ.ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದೆ.

ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಿಸುವುದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ (ಡಿಆರ್‌ಎಂ) ಜವಾಬ್ದಾರಿಯಾಗಿದೆ. ಇದು ಪ್ರಯಾಣಿಕರ ಸುರಕ್ಷತೆ ಮತ್ತು ನಿಲ್ದಾಣಗಳಲ್ಲಿ ಜನದಟ್ಟಣೆ ತಡೆಗಟ್ಟಲು ರೈಲ್ವೆ ಆಡಳಿತವು ಕೈಗೊಂಡ ತಾತ್ಕಾಲಿಕ ಕ್ರಮವಾಗಿದೆ ಎಂದು ಸ್ಪಷ್ಟೀಕರಣ ನೀಡಿ ಪ್ರಕಟಣೆ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ತೆರಿಗೆ ಸಂಗ್ರಹಿಸಲು ಕೇಂದ್ರ ಜನರನ್ನು 'ಹಣದುಬ್ಬರದ ಕೆಸರಿನ ಹೊಂಡಕ್ಕೆ' ತಳ್ಳುತ್ತಿದೆ: ರಾಗಾ ಕೆಂಡಾಮಂಡಲ

ನಿಲ್ದಾಣಕ್ಕೆ ಭೇಟಿ ನೀಡುವ ಹೆಚ್ಚಿನ ಜನರನ್ನು ತಡೆಯುವಂತಹ ಪರಿಸ್ಥಿತಿ ನಿರ್ಣಯದ ನಂತರ ಕಾಲಕಾಲಕ್ಕೆ ಪ್ಲಾಟ್‌ಫಾರ್ಮ್ ಟಿಕೆಟ್ ಶುಲ್ಕ ಹೆಚ್ಚಿಸಲಾಗುತ್ತದೆ. ನಿಲ್ದಾಣ ನಿರ್ವಹಣಾ ಅಗತ್ಯಗಳಿಗಾಗಿ ಪ್ಲಾಟ್‌ಫಾರ್ಮ್ ಟಿಕೆಟ್‌ ಶುಲ್ಕ ಬದಲಾಯಿಸುವ ಅಧಿಕಾರವನ್ನು ಡಿಆರ್‌ಎಂಗಳಿಗೆ ವಹಿಸಲಾಗಿದೆ ಎಂದಿದೆ.

ಈ ಕ್ರಮವು ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ಸಾಂದರ್ಭಿಕವಾಗಿ ಇದನ್ನು ಅಲ್ಪಾವಧಿಯ ಜನಸಮೂಹ ನಿಯಂತ್ರಣಕ್ಕೆ ಬಳಸಲಾಗುತ್ತದೆ. ಇದರಲ್ಲಿ ಹೊಸದೇನೂ ಇಲ್ಲ ಎಂದು ಸಚಿವಾಲಯ ಹೇಳಿದೆ.

ಈ ಹಿಂದೆ ಕೋವಿಡ್​-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮುಂಬರುವ ಬೇಸಿಗೆ ಕಾಲದಲ್ಲಿ ಹೆಚ್ಚಿನ ಜನಸಂದಣಿ ತಪ್ಪಿಸಲು ಕೇಂದ್ರ ರೈಲ್ವೆ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ (ಎಂಎಂಆರ್) ಕೆಲವು ಪ್ರಮುಖ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಬೆಲೆ ಹೆಚ್ಚಿಸಿತ್ತು.

ಪ್ಲಾಟ್‌ಫಾರ್ಮ್ ಟಿಕೆಟ್‌ಗೆ ಹಿಂದಿನ ದರ 10 ರೂ. ಬದಲು 50 ರೂ. ಖರ್ಚಾಗುತ್ತದೆ, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ದಾದರ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್, ನೆರೆಯ ಥಾಣೆ, ಕಲ್ಯಾಣ್, ಪನ್ವೆಲ್ ಮತ್ತು ಭಿವಾಂಡಿ ರಸ್ತೆ ನಿಲ್ದಾಣಗಳಲ್ಲಿ ಟಿಕೆಟ್​ ದರ ಏರಿಕೆಯಾಗಿದೆ ಎಂದು ಸಿಆರ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಾಜಿ ಸುತಾರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

Last Updated : Mar 5, 2021, 12:50 PM IST

ABOUT THE AUTHOR

...view details