ಹೈದರಾಬಾದ್: ನೀವು ಹಿಂದಿನ ಮೂರು ಹಣಕಾಸು ವರ್ಷಗಳಲ್ಲಿ ಆದಾಯತೆರಿಗೆ (ಐಟಿಆರ್) ಸಲ್ಲಿಸದೇ ಇದ್ದು, ಅಲ್ಲದೇ 20 ಲಕ್ಷ ರೂ.ಗಿಂತ ಹೆಚ್ಚು ಹಣವನ್ನು ಬ್ಯಾಂಕ್ನಿಂದ ಡ್ರಾ ಮಾಡಿದ್ದಲ್ಲಿ, ನೀವು ಡ್ರಾ ಮಾಡಿದ ಹಣದ ಮೇಲೆ 2 ಶೇ. ಟಿಡಿಎಸ್(ತೆರಿಗೆ ಮೂಲಗಳಲ್ಲಿ ಕಡಿತ) ಚಾರ್ಜ್ ಮಾಡಲಾಗುತ್ತದೆ.
ಹಿಂದಿನ ಮೂರು ಹಣಕಾಸು ವರ್ಷಗಳಲ್ಲಿ ಆದಾಯ ತೆರಿಗೆ ಪಾವತಿಸದೇ, 20 ಲಕ್ಷಕ್ಕಿಂತ ಹೆಚ್ಚು ಹಣ ಡ್ರಾ ಮಾಡಿದ್ದರೆ, ಶೇ2ರಷ್ಟು ತೆರಿಗೆ ಮೂಲಗಳಲ್ಲಿ ಕಡಿತ ಮಾಡಲಾಗುತ್ತದೆ. ಒಂದು ವೇಳೇ ಹಣ ಹಣ ಡ್ರಾ 1 ಕೋಟಿಗಿಂತ ಹೆಚ್ಚಿದ್ದರೆ, ಇದು 5 ಶೇ. ಆಗುತ್ತದೆ.
ಹೊಸ ಟಿಡಿಎಸ್(ಟ್ಯಾಕ್ಸ್ ಡಿಡಕ್ಟೆಡ್ ಯಟ್ ಸೋರ್ಸ್) ನಿಯಮದ ಪ್ರಕಾರ, ಹಿಂದಿನ ಮೂರು ವರ್ಷಗಳಿಂದ ತೆರಿಗೆ ಪಾವತಿ ಮಾಡದ ತೆರಿಗೆದಾರರಿಗೆ ನಗದು ಹಿಂಪಡೆಯುವಿಕೆಯ ಮಿತಿಯನ್ನು ಹಿಂದಿನ 1 ಕೋಟಿ ರೂ.ಗಳಿಂದ 20 ಲಕ್ಷರೂ.ಗೆ ಇಳಿಸಲಾಗಿದೆ. ಅಂತಹ ತೆರಿಗೆದಾರರು 20 ಲಕ್ಷ ರೂ.ಗಳಿಗಿಂತ ಹೆಚ್ಚು ಹಣ ಡ್ರಾ ಮಾಡಿದ್ದರೆ, ಅವರು ಈಗ ಶೇ.2ರಷ್ಟು ಟಿಡಿಯಸ್ ಆಗಿ ಪಾವತಿ ಮಾಡಬೇಕಾಗುತ್ತದೆ. ಇನ್ನು ಈ ನಿಯಮವು ಜುಲೈ 1, 2020ರಿಂದ ಜಾರಿಗೆ ಬರಲಿದೆ.