ನವದೆಹಲಿ:ಮೆಗಾ ಪ್ರಾಜೆಕ್ಟ್ವೊಂದಕ್ಕೆ ಕೈ ಹಾಕಿರುವ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), 2027 ರ ವೇಳೆಗೆ ಅಪಾಚೆ ಹೆಲಿಕಾಪ್ಟರ್‌ಗಳಿಗೆ ಸರಿಸಮನಾದ ಸೇನಾ ಹೆಲಿಕಾಪ್ಟರ್ ನಿರ್ಮಿಸಲು ಸಿದ್ಧವಿರುವುದಾಗಿ ಘೋಷಿಸಿದೆ.
ಅಪಾಚೆ ಮಾದರಿಯ ಹೆಲಿಕಾಪ್ಟರ್‌ನ ಪ್ರಾಥಮಿಕ ವಿನ್ಯಾಸವನ್ನು ಈಗಾಗಲೇ ಪೂರ್ಣಗೊಳಿಸಿದ್ದು, ಆರಂಭಿಕವಾಗಿ ಕನಿಷ್ಠ 500 ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸುವ ಪ್ಲಾನ್ ಇದೆ. ಈ ವರ್ಷವೇ ಸರ್ಕಾರ ಅನುಮತಿ ನೀಡಿದರೆ ಯೋಜನೆ ಪ್ರಾರಂಭಿಸಲಿದ್ದೇವೆ ಎಂದು ಸಂದರ್ಶನವೊಂದರಲ್ಲಿ ಎಚ್‌ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್ ಮಾಧವನ್ ಮಾಹಿತಿ ನೀಡಿದ್ದಾರೆ.