ಕರ್ನಾಟಕ

karnataka

ETV Bharat / business

ತಪ್ಪಾದ ತೆರಿಗೆ ಪಾವತಿಗೆ ಕ್ಷಣ ಮಾತ್ರದಲ್ಲಿ ಹಣ ವಾಪಸ್​: ಹೇಗೆ ಗೊತ್ತೇ?

ತೆರಿಗೆದಾರರು ನಿರ್ದಿಷ್ಟ ಹೆಡ್​ನಲ್ಲಿ ತಪ್ಪಾಗಿ ಜಮಾ ಮಾಡಿದ ತೆರಿಗೆಗೆ ಮರುಪಾವತಿಗಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಮೊತ್ತವನ್ನು ಮತ್ತೆ ನಗದು ಲೆಡ್ಜರ್‌ನಲ್ಲಿ ಠೇವಣಿ ಇಡಬೇಕಾಗಿಲ್ಲ ಎಂದು ಜಿಎಸ್‌ಟಿಎನ್ ಹೇಳಿದೆ.

GSTN
ಜಿಎಸ್‌ಟಿಎನ್

By

Published : May 5, 2020, 10:10 PM IST

ನವದೆಹಲಿ:ಜಿಎಸ್‌ಟಿ ನೆಟ್‌ವರ್ಕ್ (ಜಿಎಸ್‌ಟಿಎನ್) ಪೋರ್ಟಲ್‌ನಲ್ಲಿ ಹೊಸ ಹೆಡ್​ ಅಭಿವೃದ್ಧಿಪಡಿಸಿದ್ದು, ಈ ಮೂಲಕ ತೆರಿಗೆದಾರರು ಎಲೆಕ್ಟ್ರಾನಿಕ್ ಕ್ಯಾಶ್ ಲೆಡ್ಜರ್‌ನಲ್ಲಿ ಲಭ್ಯವಿರುವ ಮೊತ್ತವನ್ನು ಇನ್ನೊಂದು ಹೆಡ್​ಗೆ ಸುಲಭವಾಗಿ ವರ್ಗಾಯಿಸಬಹುದು.

ಫಾರ್ಮ್ ಜಿಎಸ್​ಟಿ ಪಿಎಂಟಿ-09 ತೆರಿಗೆದಾರರಿಗೆ ಒಂದಕ್ಕಿಂತ ಹೆಚ್ಚು ಹೆಡ್​ಗಳಿಂದ (ಮೇಜರ್ ಅಥವಾ ಮೈನರ್) ಮತ್ತೊಂದು ಹೆಡ್​ಗೆ (ಮೇಜರ್​ ಅಥವಾ ಮೈನರ್) ಬಹು ವರ್ಗಾವಣೆ ಮಾಡಬಹುದಾಗಿದೆ. ಎಲೆಕ್ಟ್ರಾನಿಕ್ ನಗದು ಲೆಡ್ಜರ್‌ನಲ್ಲಿ ಲಭ್ಯವಿರುವ ಹೊಸ ಆಯ್ಕೆ, ಇಂಟ್ರಾ-ಹೆಡ್ ಅಥವಾ ಇಂಟರ್-ಹೆಡ್ ವರ್ಗಾವಣೆಗೆ ನೆರವಾಗಲಿದೆ.

ಕೇಂದ್ರ ಜಿಎಸ್​ಟಿ, ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಜಿಎಸ್​ಟಿ, ಇಂಟಿಗ್ರೇಟೆಡ್ ಜಿಎಸ್​ಟಿ ಮತ್ತು ಸೆಸ್ ಮೇಜರ್ ಹೆಡ್​ ವ್ಯಾಪ್ತಿಗೆ ಬರುತ್ತವೆ. ಮೈನರ್ ಹೆಡ್​​ನಲ್ಲಿ ತೆರಿಗೆ, ಬಡ್ಡಿ, ವಿಳಂಬ ಪಾವತಿ ಮೇಲಿನ ಶುಲ್ಕ, ದಂಡ ಮತ್ತು ಇತ್ಯಾದಿ ಇವೆ.

ನಗದು ಸಂಪನ್ಮೂಲಗಳಿಗೆ ಸೀಮಿತವಿರುವ ಕೋವಿಡ್​-19 ಬಿಕ್ಕಟ್ಟಿನ ಸಮಯದಲ್ಲಿ ಜಿಎಸ್​ಟಿಎನ್​ ಪೋರ್ಟಲ್​ನ ಈ ಹೊಸ ಕಾರ್ಯವು ತೆರಿಗೆದಾರರಿಗೆ ಕೆಲ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ. ತೆರಿಗೆದಾರರು ನಿರ್ದಿಷ್ಟ ಹೆಡ್​ನಲ್ಲಿ ತಪ್ಪಾಗಿ ಜಮಾ ಮಾಡಿದ ತೆರಿಗೆಗೆ ಮರುಪಾವತಿಗಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಮೊತ್ತವನ್ನು ಮತ್ತೆ ನಗದು ಲೆಡ್ಜರ್‌ನಲ್ಲಿ ಠೇವಣಿ ಇಡಬೇಕಾಗಿಲ್ಲ ಎಂದು ಜಿಎಸ್‌ಟಿಎನ್ ಹೇಳಿದೆ.

ABOUT THE AUTHOR

...view details