ನವದೆಹಲಿ: ನಕಲಿ ದಾಖಲೆಗಳ ಮೇಲೆ ಕಾಲ್ಪನಿಕ ಸಂಸ್ಥೆ ಹುಟ್ಟುಹಾಕಿ 43 ಕೋಟಿ ರೂ. ಮೌಲ್ಯದ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚಿಸಿದ ಪ್ರಕರಣದಡಿ ಓರ್ವನನ್ನು ಬಂಧಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಹರಿಯಾಣದ ಜಿಎಸ್‌ಟಿ ಇಂಟೆಲಿಜೆನ್ಸ್‌ನ ನಿರ್ದೇಶನಾಲಯದ (ಡಿಜಿಎಂಐ) ಗುರುಗ್ರಾಮ್ ವಲಯ ಘಟಕ (ಜಿ ಝೆಡ್ಯು) ದೆಹಲಿಯ ನಿವಾಸಿ ರವೀಂದರ್ ಕುಮಾರ್ ಎಂಬುವವರನ್ನು ಬಂಧಿಸಿದೆ. ಸರಕು ಅಥವಾ ಸೇವೆಗಳ ನೈಜ ರಶೀದಿ ಮತ್ತು ಪೂರೈಕೆಯಿಲ್ಲದೆ ನಕಲಿ ಇನ್‌ವಾಯ್ಸ್‌ಗಳಲ್ಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚನೆ ಎಸಗಿದ್ದ.
ಇದುವರೆಗೆ ನಡೆದ ತನಿಖೆಯಿಂದ ಕುಮಾರ್ ಅವರು ಹರಿಯಾಣ, ದೆಹಲಿ ಮತ್ತು ಜಾರ್ಖಂಡ್ ಮೂಲದ ಬಹು ಮಾಲೀಕತ್ವ, ಪಾಲುದಾರಿಕೆ ಸಂಸ್ಥೆಗಳು ಮತ್ತು ಖಾಸಗಿ ಸೀಮಿತ ಕಂಪನಿಗಳನ್ನು ಕೇವಲ ಕಾಗದದ ಮೇಲೆ ತೋರಿಸಿ ತೆರಿಗೆ ತಪ್ಪಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.