ನವದೆಹಲಿ:ಹಣಕಾಸು ವರ್ಷ ಕೊನೆಯ ತಿಂಗಳಾದ ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ ದಾಖಲೆಯ ಮೊತ್ತದಲ್ಲಿ ಸರಕು ಮತ್ತು ಸೇವಾ ತೆರಿಗೆ ಹರಿದು ಬಂದಿದೆ.
2018ರ ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ 12.1ರಷ್ಟು ತೆರಿಗೆ ಬೊಕ್ಕಸಕ್ಕೆ ಬಂದಿದ್ದರೇ ಮಾರ್ಚ್ ತ್ರೈಮಾಸಿಕದಲ್ಲಿ ಶೇ 14.3ಕ್ಕೆ ಏರಿಕೆ ಆಗಿದೆ. ಮಾರ್ಚ್ ತಿಂಗಳಲ್ಲೇ ನೇರ, ವೈಯಕ್ತಿಕ ಹಾಗೂ ಸಾಂಸ್ಥಿಕ ತೆರಿಗೆ ಪಾಲು ಸೇರಿ ಒಟ್ಟು ₹ 1.06 ಲಕ್ಷ ಕೋಟಿ ತಲುಪಿದೆ. ಆದರೂ ಬಜೆಟ್ನಲ್ಲಿ ನಿರೀಕ್ಷಿತ ಉದ್ದೇಶ ತಲುಪುವಲ್ಲಿ ನೇರ ತೆರಿಗೆ ಸಂಗ್ರಹ ಪ್ರಮಾಣ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.