41ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿ ಸಭೆಯಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾಪಿಸಿದ ಎರಡು ಆಯ್ಕೆಗಳ ಸೂತ್ರವನ್ನು ಹಲವು ರಾಜ್ಯಗಳು ವಿರೋಧಿಸಿ ಅಸಮಾಧಾನ ವ್ಯಕ್ತಪಡಿಸಿವೆ. ಪ್ರಸಕ್ತ ವರ್ಷದಲ್ಲಿ ತಮ್ಮ ಆದಾಯ ಸಂಗ್ರಹದಲ್ಲಿನ ಕೊರತೆ ನೀಗಿಸಿಕೊಳ್ಳಲು ರಾಜ್ಯಗಳು ರಿಸರ್ವ್ ಬ್ಯಾಂಕ್ ರೂಪಿಸಿದ ಕಾರ್ಯವಿಧಾನದ ಮೂಲಕ ಸಾಲ ಪಡೆಯಬೇಕಿದೆ.
ಕೇರಳದ ಹಣಕಾಸು ಮಂತ್ರಿ ಥಾಮಸ್ ಇಸಾಕ್ ಮತ್ತು ಪಂಜಾಬ್ನ ವಿತ್ತ ಸಚಿವ ಮನ್ಪ್ರೀತ್ ಬಾದಲ್ ಅವರು ಕೇಂದ್ರದ ಪ್ರಸ್ತಾವನೆ ವಿರೋಧಿಸಿ, ಸಾರ್ವಜನಿಕರ ನಡೆಗೆ ವಿರುದ್ಧವಾಗಿ ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.
ಸಭೆಯಲ್ಲಿ ನಾಟಕೀಯ ಬೆಳವಣಿಗೆಯೊಂದು ನಡೆದಿದ್ದು, ಸಂವಿಧಾನದ ಬದ್ಧವಾದ ಜಿಎಸ್ಟಿ ಬಾಕಿ ಪಾವತಿಗೆ ಇತರ ರಾಜ್ಯಗಳು ಕೇಂದ್ರವನ್ನು ಸಾಲಕ್ಕೆ ಒತ್ತಾಯಿಸಿದಾಗ ಸಭೆಯ ಆರಂಭದಿಂದಲೂ ಸಾಲ ಪಡೆಯಲು ಬಿಹಾರ ತನ್ನ ಇಚ್ಛೆ ಇರುವುದಾಗಿ ಸಮ್ಮತಿಸಿತು.
ಬಿಹಾರವು ತನ್ನ ಆದಾಯದ ಕೊರತೆ ಪೂರೈಸಿಕೊಳ್ಳಲು ಹಣವನ್ನು ಎರವಲು ಪಡೆಯಲು ಒಪ್ಪಿಕೊಂಡಿದೆ. ಆದರೆ ಇತರ ರಾಜ್ಯಗಳು ಇದಕ್ಕೆ ವಿರುದ್ಧವಾಗಿವೆ ಎಂದು ಜಿಎಸ್ಟಿ ಮಂಡಳಿ ಸಭೆಯಲ್ಲಿ ಆರಂಭಿಕ ಚರ್ಚೆಯ ವಿವರ ತಿಳಿದಿರುವ ವ್ಯಕ್ತಿಯೊಬ್ಬರು ಈಟಿವಿ ಭಾರತಗೆ ತಿಳಿಸಿದರು.
ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ವರ್ಚ್ಯುಲ್ ಸಭೆಯಲ್ಲಿ, ರಾಜ್ಯಗಳು ಸಾಂವಿಧಾನಿಕವಾಗಿ ಖಾತರಿಪಡಿಸಿದ ಜಿಎಸ್ಟಿ ಬಾಕಿ ಪಾವತಿಸಲು ಕೇಂದ್ರವು ಸಾಲವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು ಎಂದರು.
ಜಿಎಸ್ಟಿ ವ್ಯವಸ್ಥೆಯಿಂದ ಆಗಿರುವ ಆದಾಯ ಕೊರತೆಯಾದ 97,000 ಕೋಟಿ ರೂ.ಸಾಲವಾಗಿ ಪಡೆಯುವುದು. ಅಥವಾ, ಜಿಎಸ್ಟಿ ಆದಾಯ ಕೊರತೆ ಹಾಗೂ ಕೋವಿಡ್–19ನಿಂದ ಆಗಿರುವ ನಷ್ಟವನ್ನೂ ಒಳಗೊಂಡ ಒಟ್ಟು 2.35 ಲಕ್ಷ ಕೋಟಿ ರೂ.ಯನ್ನೂ ಸಾಲವಾಗಿ ಪಡೆಯುವುದು ಎಂಬ ಎರಡು ಆಯ್ಕೆಗಳನ್ನು ಪಡೆಯಬಹುದು ಎಂದು ನಿರ್ಮಲಾ ಸೀತಾರಾಮನ್ ಬ್ರೀಫಿಂಗ್ನಲ್ಲಿ ಹೇಳಿದರು.