ನವದೆಹಲಿ:ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಜೂನ್ 12ರಂದು ತನ್ನ ಸಭೆ ನಡೆಸಲಿದ್ದು, ಅಂದು ಕೋವಿಡ್ -19 ಸಂಬಂಧಿತ ಅಗತ್ಯ ವಸ್ತುಗಳ ತೆರಿಗೆ ವಿಧಿಸುವ ಅಥವಾ ವಿನಾಯಿತಿಯ ಕುರಿತು ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ. ಮಂಗಳವಾರ ಸಚಿವರು ತಂಡ ಸಲ್ಲಿಸಿದ ಶಿಫಾರಸು ಅನುಸರಿಸಿ ಕೋವಿಡ್ ಸಂಬಂಧಿತ ವಸ್ತುಗಳ ಮೇಲಿನ ವಿನಾಯಿತಿ ಮತ್ತು ರಿಯಾಯತಿಯ ಬಗ್ಗೆಯೇ ಸಭೆಯಲ್ಲಿ ಚರ್ಚಿಸುವ ನಿರೀಕ್ಷೆಯಿದೆ.
ಈ ಕುರಿತಾಗಿ ಸಚಿವರ ತಂಡದ ಶಿಫಾರಸನ್ನು ಇನ್ನೂ ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ಆದರೆ, ಲಸಿಕೆಗೆ ತೆರಿಗೆ ವಿಧಿಸುವ ವಿಷಯವನ್ನು ಮತ್ತೆ ಮಂಡಳಿಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ವಾಣಿಜ್ಯ ಆಮದು ಮತ್ತು ವೈದ್ಯಕೀಯ ಆಮ್ಲಜನಕ, ಆಮ್ಲಜನಕ ಸಾಂದ್ರಕಗಳು, ಆಕ್ಸಿಮೀಟರ್‌ಗಳು ಮತ್ತು ಪರೀಕ್ಷಾ ಕಿಟ್‌ಗಳು ಸೇರಿದಂತೆ ಕೋವಿಡ್ ಔಷಧಿಗಳು ಮತ್ತು ವಸ್ತುಗಳ ದೇಶೀಯ ಪೂರೈಕೆಯ ಮೇಲಿನ ಜಿಎಸ್‌ಟಿ ದರವನ್ನು ತಾತ್ಕಾಲಿಕವಾಗಿ ಶೇ 5ಕ್ಕೆ ಇಳಿಸಲು ಸೂಚಿಸಿದೆ.