ಕರ್ನಾಟಕ

karnataka

ETV Bharat / business

ಜಿಎಸ್​ಟಿ ನಷ್ಟ ಪರಿಹಾರ: ಕೇಂದ್ರದ 1.06 ಲಕ್ಷ ಕೋಟಿ ರೂ.ಯಲ್ಲಿ ರಾಜ್ಯಕ್ಕೆ ಸಿಕ್ಕಿದೆಷ್ಟು? - ರಾಜ್ಯಗಳಿಗೆ ಜಿಎಸ್​ಟಿ ನಷ್ಟ ಪರಿಹಾರ

ಜಿಎಸ್‌ಟಿ ಅನುಷ್ಠಾನದಿಂದ ಉಂಟಾದ ಆದಾಯದ 1.10 ಲಕ್ಷ ಕೋಟಿ ರೂ. ಕೊರತೆ ನೀಗಿಸಲು ಕೇಂದ್ರವು 2020ರ ಅಕ್ಟೋಬರ್‌ನಲ್ಲಿ ವಿಶೇಷ ಸಾಲ ಪಡೆಯುವ ವಿಂಡೋ ಸ್ಥಾಪಿಸಿತ್ತು. ರಾಜ್ಯಗಳು ಮತ್ತು ಯುಟಿಗಳ ಪರವಾಗಿ ಕೇಂದ್ರವು ಎರವಲು ಪಡೆದು ನೀಡುತ್ತಿದೆ.

GST
GST

By

Published : Mar 9, 2021, 1:23 PM IST

Updated : Mar 9, 2021, 1:34 PM IST

ನವದೆಹಲಿ:ಜಿಎಸ್​ಟಿ ನಷ್ಟ ಪರಿಹಾರದ ಕೊರತೆ ನೀಗಿಸಲು ಹಣಕಾಸು ಸಚಿವಾಲಯದ ಖರ್ಚು ಇಲಾಖೆಯು 19ನೇ ಸಾಪ್ತಾಹಿಕ ಕಂತಿನ ಹಣ ಬಿಡುಗಡೆ ಮಾಡಿದೆ.

ಜಿಎಸ್​ಟಿ ಪರಿಹಾರದ ಕೊರತೆ ಪೂರೈಸಲು ರಾಜ್ಯಗಳಿಗೆ 2,104 ಕೋಟಿ ರೂ. ನೀಡಲಾಗಿದ್ದು, ಇದರಲ್ಲಿ 2,103.95 ಕೋಟಿ ರೂ. 7 ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ. 0.05 ಕೋಟಿ ರೂ.ಯನ್ನು ಕೇಂದ್ರ ಪ್ರದೇಶ ಪುದುಚೇರಿಗೆ ಕೊಡಲಾಗಿದೆ.

ಇಲ್ಲಿಯವರೆಗೆ ಒಟ್ಟು ಅಂದಾಜು ಜಿಎಸ್​​ಟಿ ಪರಿಹಾರದ ಕೊರತೆಯ 96 ಪ್ರತಿಶತವನ್ನು ರಾಜ್ಯಗಳು ಮತ್ತು ಯುಟಿಗಳಿಗೆ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 97,242.03 ಕೋಟಿ ರೂ. ರಾಜ್ಯಗಳಿಗೆ ಹಾಗೂ 3 ಯುಟಿಗಳಿಗೆ 8,861.97 ಕೋಟಿ ರೂ. ನೀಡಲಾಗಿದೆ.

ಇದನ್ನೂ ಓದಿ: 2020ರಲ್ಲಿ ದೇಶದ 10 ಸಾವಿರ ಕಂಪನಿಗಳ ಬಾಗಿಲು ಬಂದ್​​​: ಇದ್ರಲ್ಲಿ ಕರ್ನಾಟಕದವು ಎಷ್ಟು ಗೊತ್ತೇ?

ಜಿಎಸ್‌ಟಿ ಅನುಷ್ಠಾನದಿಂದ ಉಂಟಾದ ಆದಾಯದ 1.10 ಲಕ್ಷ ಕೋಟಿ ರೂ. ಕೊರತೆ ನೀಗಿಸಲು ಕೇಂದ್ರವು 2020ರ ಅಕ್ಟೋಬರ್‌ನಲ್ಲಿ ವಿಶೇಷ ಸಾಲ ಪಡೆಯುವ ವಿಂಡೋ ಸ್ಥಾಪಿಸಿತ್ತು. ರಾಜ್ಯಗಳು ಮತ್ತು ಯುಟಿಗಳ ಪರವಾಗಿ ಕೇಂದ್ರವು ಎರವಲು ಪಡೆದು ನೀಡುತ್ತಿದೆ.

ಈ ವಾರ ಬಿಡುಗಡೆಯಾದ ಮೊತ್ತವು ರಾಜ್ಯಗಳಿಗೆ ಒದಗಿಸಲಾದ 19ನೇ ಕಂತಾಗಿದೆ. ಈ ವಾರದಲ್ಲಿ ಶೇ 5.8594ರಷ್ಟು ಬಡ್ಡಿದರದಲ್ಲಿ ಎರವಲು ಪಡೆಯಲಾಗಿದೆ. ಇಲ್ಲಿಯವರೆಗೆ 1,06,104 ಕೋಟಿ ರೂ. ಕೇಂದ್ರ ಸರ್ಕಾರವು ವಿಶೇಷ ಎರವಲು ವಿಂಡೋ ಮೂಲಕ ಸರಾಸರಿ ಶೇ 4.8842ರಷ್ಟು ಬಡ್ಡಿದರದಲ್ಲಿ ಎರವಲು ಪಡೆದಿದೆ.

Last Updated : Mar 9, 2021, 1:34 PM IST

ABOUT THE AUTHOR

...view details