ಬೆಂಗಳೂರು:ಸಿಲಿಕಾನ್ ಸಿಟಿಗೆ ತಲುಪಲು ಡೊಮೆಸ್ಟಿಕ್ ವಿಮಾನಕ್ಕೆ 500 ರೂಪಾಯಿ ಹಾಗೂ ಅಂತಾರಾಷ್ಟ್ರೀಯ ವಿಮಾನಕ್ಕೆ 2000 ರೂಪಾಯಿಗಳ ರಿಯಾಯಿತಿಯನ್ನು ಈಸ್ ಮೈ ಟ್ರಿಪ್ ಸಂಸ್ಥೆ ಘೋಷಸಿದೆ.
ರಜಾ ದಿನಗಳಲ್ಲಿ ಔಟಿಂಗ್ ಹೋಗಿ, ದೂರದ ಊರಿನ ಪ್ರವಾಸಿ ತಾಣಗಳನ್ನು ನೋಡಬೇಕು ಅನ್ನೋದು ಮಧ್ಯಮ ವರ್ಗದವರ ಕನಸು. ಅದರಲ್ಲೂ ವಿಮಾನ ಏರಿ ಒಂದು ಸಾರಿ ಟ್ರಿಪ್ ಹೋಗಬೇಕು ಅನ್ನೊದು ಹೆಚ್ಚಿನ ಮಧ್ಯಮ ವರ್ಗದ ಕುಟುಂಬಗಳ ಕನಸಾಗಿರುತ್ತದೆ. ಈಗ ಆ ಕನಸು ಈಡೇರುವ ಅವಕಾಶ ಬಂದಿದೆ ಅಂದ್ರೆ ತಪ್ಪಾಗಲ್ಲ.
ಈಸ್ ಮೈ ಟ್ರಿಪ್ ಆ್ಯಪ್ ಅಥವಾ ವೆಬ್ಸೈಟ್ನಲ್ಲಿ ಲಾಗಿನ್ ಆಗಿ ಕರ್ನಾಟಕದ ಯಾವುದೇ ವಿಮಾನ ನಿಲ್ದಾಣಕ್ಕೆ ಅಥವಾ ವಿಮಾನ ನಿಲ್ದಾಣದಿಂದ ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಪ್ರೋಮೋ ಕೋಡ್ ಆದ 'EMTKARNATAKA' ಬಳಸಿಕೊಂಡರೆ, ದೇಶೀಯ ವಿಮಾನಯಾನ ದರದ ಮೇಲೆ ಐನೂರು ರೂಪಾಯಿ ಹಾಗೂ ಅಂತರರಾಷ್ಟ್ರೀಯ ವಿಮಾನ ಯಾನಕ್ಕೆ ಎರಡು ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಈ ಸಂಸ್ಥೆ ಘೋಷಿಸಿದೆ.
ಇದೇ ವೇಳೆ ಈ ಟಿವಿ ಭಾರತ್ನೊಂದಿಗೆ ಮಾತನಾಡಿದ ಉಪಾಧ್ಯಕ್ಷೆ ರಾಲಿ ಸಿನ್ಹಾ ಧರ್, ಈಸ್ ಮೈ ಟ್ರಿಪ್ ಸಂಸ್ಥೆ ಈ ವರ್ಷ ಬಳಕೆದಾರರನ್ನು ಶೇಕಡ 25ರಷ್ಟು ಏರಿಕೆ ಮಾಡಬೇಕು ಎಂದು ನಿರ್ಧರಿಸಿದೆ. ಆಫರ್ ಬಗ್ಗೆ ಮಾತನಾಡಿದ ಇವರು ಯಾವುದೇ ನೀತಿಗಳು ಅಥವಾ ಷರತ್ತುಗಳು ಇಲ್ಲದೆ, ಈ ಪ್ರೋಮೋ ಕೋಡ್ ಬಳಸಿ ರಿಯಾಯಿತಿಯನ್ನು ಪಡೆಯಬಹುದು. ಆದರೆ ಈ ಪ್ರೋಮೋ ಕೋಡ್ ಬಳಸಿದ ನಂತರ ಇನ್ಯಾವುದೇ ಆಫರ್ಗಳನ್ನು ಇದಕ್ಕೆ ಜೋಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಸದ್ಯ ಈಸ್ ಮೈ ಟ್ರಿಪ್ ಸಂಸ್ಥೆಗೆ ಸ್ಪರ್ಧಿಯಾಗಿರುವ ಕ್ಲಿಯರ್ ಟ್ರಿಪ್, ಐಬಿಬೋ ಹಾಗೂ ಮೇಕ್ ಮೈ ಟ್ರಿಪ್ನಂತ ಸಂಸ್ಥೆಗಳು ಇಂತಹ ರಿಯಾಯಿತಿಗಳನ್ನು ಘೋಷಿಸುವ ನಿರೀಕ್ಷೆಯಲ್ಲಿ ಬಳಕೆದಾರರು ಇದ್ದಾರೆ ಎಂದರೆ ತಪ್ಪಾಗಲಾರದು.