ನವದೆಹಲಿ :ಗೂಗಲ್ ಇಂಡಿಯಾ ಡಿಜಿಟಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ತನ್ನ ಗೂಗಲ್ ಪೇ ಅಪ್ಲಿಕೇಷನ್‌ಗೆ ಆರ್‌ಬಿಐ ಅನುಮತಿ ಅಗತ್ಯವಿಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಇದೊಂದು ಪಾವತಿ ವ್ಯವಸ್ಥೆ ಆಪರೇಟರ್ (ಪಿಎಸ್‌ಒ) ಅಲ್ಲ. ಆದರೆ, ಇದು ಮೂರನೇ ವ್ಯಕ್ತಿಯ ಅಪ್ಲಿಕೇಷನ್ ಪೂರೈಕೆದಾರ ಎಂದು ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅಧಿಕಾರ ಹೊಂದಿರುವ ಪಿಎಸ್‌ಒ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಆಗಿದೆ. ಇದು ಸಂಪೂರ್ಣ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ನೆಟ್‌ವರ್ಕ್‌ನ ಮಾಲೀಕರು ಮತ್ತು ನಿರ್ವಾಹಕರು ಎಂದು ಗೂಗಲ್ ಅಫಿಡವಿಟ್‌ನಲ್ಲಿ ತಿಳಿಸಿದೆ.