ನವದೆಹಲಿ:2021ರ ಹಣಕಾಸು ವರ್ಷದಲ್ಲಿನ ಯೋಜಿತ ಕ್ಯಾಪೆಕ್ಸ್ (ಬಂಡವಾಳ ವೆಚ್ಚ) ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ ಮತ್ತು ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಹಾನಿಗೊಳಗಾದ ಆರ್ಥಿಕತೆಯ ಬೆಳವಣಿಗೆ ಕಾಯ್ದುಕೊಳ್ಳುವಂತೆ ಸರ್ಕಾರ ಸಾರ್ವಜನಿಕ ವಲಯದ ಉದ್ಯಮಗಳಿಗೆ (ಪಿಎಸ್‌ಯು) ಒತ್ತಾಯಿಸಿದೆ.
ಖಾಸಗಿ ಹೂಡಿಕೆಯು ಈಗಾಗಲೇ ಸ್ಥಗಿತಗೊಂಡಿದೆ. ಸರ್ಕಾರವು ಇದನ್ನು ನಿರ್ವಹಿಸುವ ಕಂಪನಿಗಳು ಖರ್ಚನ್ನು ಹೆಚ್ಚಿಸುವ ಮೂಲಕ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸಿ ದೇಶದ ಮನಸ್ಥಿತಿಯನ್ನು ಬದಲಿಸಬೇಕೆಂದು ಬಯಸುತ್ತಿದೆ. ಇದು ಆದಾಯದ ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ ಎಂಬುದು ಸರ್ಕಾರದ ವಾದ.
ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ, ಉಕ್ಕು ಮತ್ತು ರೈಲ್ವೆ ಮಂಡಳಿ ಅಧ್ಯಕ್ಷರು ಸೇರಿದಂತೆ 7 ಸಿಪಿಎಸ್ಇ ಕಾರ್ಯದರ್ಶಿಗಳ ಜತೆ ಸಭೆ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಉದ್ಯಮಗಳು (ಸಿಪಿಎಸ್ಇ) ಉತ್ತಮ ಕಾರ್ಯಕ್ಷಮತೆ ತೋರಿದರೇ ಕೋವಿಡ್-19ರ ಪ್ರಭಾವದಿಂದ ಚೇತರಿಸಿಕೊಳ್ಳಲು ಆರ್ಥಿಕತೆಗೆ ದೊಡ್ಡ ರೀತಿಯಲ್ಲಿ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.