ಬೆಂಗಳೂರು: ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಲ್ಲಿನ ಶೇ.15 ರಷ್ಟು ಷೇರುಗಳನ್ನು ಮಾರಾಟ ಪ್ರಸ್ತಾಪ(ಆಫರ್ ಫಾರ್ ಸೇಲ್)ದ ಮೂಲಕ ಪ್ರತಿ ಷೇರಿಗೆ 1,001 ರೂ.ನಂತೆ ಮಾರಾಟ ಮಾಡುತ್ತಿದೆ.
ರಕ್ಷಣಾ ಸಚಿವಾಲಯವು, ಕಂಪನಿಯಲ್ಲಿನ ಷೇರುಗಳ ಶೇ.15 ರಷ್ಟು (5.01 ಕೋಟಿ ಷೇರುಗಳು)10 ರೂ.ಗಳ ಮುಖಬೆಲೆಯ ಷೇರುಗಳನ್ನು ಪ್ರತಿ ಷೇರಿಗೆ 1,001 ರೂ.ನಂತೆ ಆಫರ್ ಫಾರ್ ಸೇಲ್ ಮೂಲಕ ಮಾರಾಟ ಮಾಡುವ ಬಗ್ಗೆ ಷೇರು ವಿನಿಮಯ ಕೇಂದ್ರಗಳಿಗೆ ತಿಳಿಸಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.