ನವದೆಹಲಿ:ಮುಂಬರುವ ಹೋಳಿ ಹಬ್ಬಕ್ಕೂ ಮುಂಚಿತವಾಗಿ 'ವಿವಾದ್ ಸೆ ವಿಶ್ವಾಸ್' ಯೋಜನೆಯನ್ನು ತಿಳಿಸುತ್ತೇವೆ ಎಂದು CBDTಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಜೆಟ್ ಅಧಿವೇಶನದ ಎರಡನೇ ಅವಧಿಗೆ ಸಂಸತ್ತಿನಲ್ಲಿ ಸಭೆ ಸೇರುವ ವೇಳೆಗೆ, ತೆರಿಗೆ ಪ್ರಕರಣಗಳ ಇತ್ಯರ್ಥಕ್ಕಾಗಿ ಜಾರಿಗೆ ತರಲು ಯೋಜಿಸಿರುವ ವಿವಾದ್ ಸೆ ವಿಶ್ವಾಸ್ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಹಣಕಾಸು ಸಚಿವಾಲಯ ಅಧಿಕಾವಧಿ ಕೆಲಸ ಮಾಡುತ್ತಿದೆ. ಕಳೆದ ತಿಂಗಳು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ 'ವಿವಾದ್ ಸೆ ವಿಶ್ವಾಸ್' ಯೋಜನೆಯನ್ನು ಘೋಷಿಸಿದ್ದರು.
ಮೇಲ್ಮನವಿ ಆಯುಕ್ತರು, ಆದಾಯ ತೆರಿಗೆ ಮೇಲ್ಮನವಿ ನ್ಯಾಯಧಿಕರಣ (ಐಟಿಎಟಿ), ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಸೇರಿದಂತೆ ವಿವಿಧ ವೇದಿಕೆಗಳ ಮುಂದೆ 4.8 ಲಕ್ಷಕ್ಕೂ ಹೆಚ್ಚು ನೇರ ತೆರಿಗೆ ವಿವಾದಗಳು ಬಾಕಿ ಉಳಿದಿವೆ. ಈ ಪ್ರಕರಣಗಳಲ್ಲಿ ಸುಮಾರು 9 ಲಕ್ಷ ಕೋಟಿ ರೂಪಾಯಿ ಸಿಲುಕಿಕೊಂಡಿದ್ದು, ಈ ಯೋಜನೆಯ ಮೂಲಕ 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಮರುಸಂಗ್ರಹಿಸುವ ಭರವಸೆಯನ್ನ ಸರ್ಕಾರ ಹೊಂದಿದೆ.