ನವದೆಹಲಿ:ನಿಷೇಧಿತ ರಫ್ತು ವಸ್ತುಗಳ ಪಟ್ಟಿಯಿಂದ ಕೇಂದ್ರ ಸರ್ಕಾರವು ಶಸ್ತ್ರಚಿಕಿತ್ಸೆಯ ಮುಖವಾಡಗಳು ಮತ್ತು ಕೈಗವಸು ಸರಕುಗಳನ್ನು ತೆಗೆದುಹಾಕಿಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.
ಕಳೆದ ತಿಂಗಳು ಚೀನಾದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಹರಡಿತ್ತು. ಸಾವಿರಾರು ಜನರಿಗೆ ಈ ಸೋಂಕು ತಗಲಿದೆ. ಉಸಿರಾಟದ ಮೂಲಕ ಹಬ್ಬುವ ಸೋಂಕಿನ ಕಣಗಳಿಂದ ರಕ್ಷಣೆ ಪಡೆಯಲು ಬಳಸುವ ಬಟ್ಟೆ ಮತ್ತು ಮುಖವಾಡಗಳು ಸೇರಿ ಎಲ್ಲ ರೀತಿಯ ವೈಯಕ್ತಿಕ ರಕ್ಷಣಾ ಸಾಧನಗಳ ರಫ್ತಿಗೆ ಕೇಂದ್ರ ಸರ್ಕಾರ ಈ ಹಿಂದೆ ನಿಷೇಧ ಹೇರಿತ್ತು.
ಮಾರಣಾಂತಿಕ ಕೊರೊನಾ ವೈರಸ್ ಏಕಾಏಕಿ ಉಂಟಾದ ಕಾರಣ ಇಂತಹ ಉತ್ಪನ್ನಗಳಿಗೆ ನೆರೆಯ ರಾಷ್ಟ್ರಗಳಲ್ಲಿ ಭಾರೀ ಬೇಡಿಕೆ ಕಂಡು ಬಂದಿದ್ದರಿಂದ ಕೇಂದ್ರದ ಈ ನಡೆಯು ಚೀನಾಗೆ ಮಹತ್ವದ್ದಾಗಿದೆ. ಚೀನಾ ಜೊತೆ ಸೇರಿ ಕೊರೊನಾ ವಿರುದ್ಧ ಹೋರಾಡಲು ಭಾರತ ಪರೋಕ್ಷವಾಗಿ ಬೆಂಬಲ ನೀಡಿದಂತಾಗಿದೆ.
ಶಸ್ತ್ರಚಿಕಿತ್ಸೆ ಬಳಿಕ ಬಿಸಾಡಬಹುದಾದ ಮುಖವಾಡಗಳು ಮತ್ತು ಎನ್‌ಬಿಆರ್ ಕೈಗವಸುಗಳನ್ನು ಹೊರತುಪಡಿಸಿ ಎಲ್ಲ ವಿಧದ ಕೈಗವಸುಗಳನ್ನು ರಫ್ತು ಮಾಡಲು ಮುಕ್ತವಾಗಿ ಅನುಮತಿಸಲಾಗಿದೆ ಎಂದು ವಿದೇಶಿ ವ್ಯಾಪಾರದ ನಿರ್ದೇಶನಾಲಯ ಜನರಲ್ (ಡಿಜಿಎಫ್‌ಟಿ) ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಎನ್-95 ಮುಖವಾಡ ಹಾಗೂ ಕೈಗವಸುಗಳ ಜೊತೆಯಲ್ಲಿರುವ ಇತರ ಎಲ್ಲಾ ವೈಯಕ್ತಿಕ ರಕ್ಷಣಾ ಸಾಧನಗಳ ರಫ್ತಿಗೆ ನಿಷೇಧ ಯಥಾವತ್ತಾಗಿ ಇರಲಿದೆ ಎಂದು ಹೇಳಿದೆ.