ನವದೆಹಲಿ :ನೇರ ತೆರಿಗೆ ವಿವಾದಗಳನ್ನು ಬಗೆಹರಿಸಲು ಪ್ರಯತ್ನಿಸುವ 'ವಿವಾದ್ ಸೆ ವಿಶ್ವ' ಯೋಜನೆಯಡಿ ಅರ್ಜಿ ಸಲ್ಲಿಸುವ ಗಡುವನ್ನು ಕೇಂದ್ರ ವಿಸ್ತರಿಸಿದೆ.
ಫೆಬ್ರವರಿ 28ರ ಗಡುವನ್ನು ಮಾರ್ಚ್ 31ಕ್ಕೆ ವಿಸ್ತರಿಸಲಾಗಿದೆ. ಅಲ್ಲದೆ, ವಿವಾದ ಪರಿಹಾರ ಯೋಜನೆಯಡಿ ಪಾವತಿ ದಿನಾಂಕವನ್ನು ಏಪ್ರಿಲ್ 30ಕ್ಕೆ ಬದಲಾಯಿಸಲಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಪ್ರಕಟಣೆಯಲ್ಲಿ ತಿಳಿಸಿದೆ.
ವಿವಾದ್ ಸೆ ವಿಶ್ವಾಸ್ ಮೇಲ್ಮನವಿ ವೇದಿಕೆಗಳಲ್ಲಿ ಪ್ರಸ್ತುತ 5,10,491 ಪ್ರಕರಣ ಬಾಕಿ ಇವೆ. ಈ ಪೈಕಿ ಶೇ.24.5ರಷ್ಟು ಅಥವಾ 1,25,144 ಪ್ರಕರಣ ವಿವಾದ ಯೋಜನೆ ಪಡೆಯಲು ಅರ್ಜಿ ಸಲ್ಲಿಸಿವೆ. ಇದರೊಂದಿಗೆ ಸುಮಾರು 97,000 ಕೋಟಿ ರೂ. ಮೌಲ್ಯದ ವಿವಾದಗಳನ್ನು ಯೋಜನೆಯಡಿ ಬಗೆಹರಿಸಲಾಗುವುದು.
ಇದನ್ನೂ ಓದಿ: 'ಒಂದು ಜಿಲ್ಲೆ ಒಂದು ಉತ್ಪನ್ನ' ಪಟ್ಟಿ ಸಿದ್ಧ: ಸ್ಥಳೀಯ ಆರ್ಥಿಕತೆಗೆ ಉತ್ತೇಜನ, ಉದ್ಯೋಗ ಸೃಷ್ಟಿ!
ವಿವಿಧ ಮೇಲ್ಮನವಿ ವೇದಿಕೆಗಳಲ್ಲಿ ನೇರ ತೆರಿಗೆ ವಿವಾದಗಳನ್ನು ಬಗೆಹರಿಸಲು ಕೇಂದ್ರವು 'ವಿವಾದ ಸೆ ವಿಶ್ವಾಸ್' ಯೋಜನೆಯನ್ನು ಪ್ರಾರಂಭಿಸಿತ್ತು. ಇನ್ನೂ ವಿಚಾರಣೆ ಆರಂಭಿಸದ ಕಂಪನಿಗಳು ಸಹ 'ವಿವಾದ್ ಸೆ ವಿಶ್ವಾಸ್' ಯೋಜನೆಯ ಲಾಭ ಪಡೆಯಬಹುದು ಎಂದು ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ಸ್ಪಷ್ಟಪಡಿಸಿದೆ.