ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಕಂಪನಿ ಷೇರು ಖರೀದಿ ಬಿಡ್ ಆಹ್ವಾನದ ಅಂತಿಮ ಗಡುವನ್ನು ಮತ್ತೆ ಮುಂದೂಡಲಾಗಿದೆ.
ಬಿಪಿಸಿಎಲ್ನಲ್ಲಿ ಸರ್ಕಾರ ತಾನು ಹೊಂದಿದ್ದ ಶೇ 52.98ರಷ್ಟು ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವುದಾಗಿ ಘೋಷಿಸಿತ್ತು. ಖಾಸಗೀಕರಣದ ಭಾಗವಾಗಿ ಷೇರು ಖರೀದಿಯ ಆಸಕ್ತಿ (ಇಒಐ) ಅಥವಾ ಬಿಡ್ ಸಲ್ಲಿಕೆಯ ಅಂತಿಮ ದಿನಾಂಕವನ್ನು ಸೆಪ್ಟೆಂಬರ್ 30ಕ್ಕೆ ನಿಗದಿಪಡಿಸಿದೆ.
ಇದಕ್ಕೂ ಮೊದಲು ಎರಡು ಬಾರಿ ಸಮಯ ಮುಂದೂಡಿತ್ತು. ಮಾರ್ಚ್ 31ರಂದು ಮೇ 2ರ ಗಡುವನ್ನು ಜುನ್ 13ಕ್ಕೆ ಹಾಗೂ ಮತ್ತೆ ಜುಲೈ 31ಕ್ಕೆ ನಿಗದಿಪಡಿಸಿತ್ತು. ಇಂದು ಮೂರನೇ ಬಾರಿ ಅವಧಿ ಮುಂದಕ್ಕೆ ಹಾಕಿದೆ.
ಮತ್ತೊಂದಡೆ, ಬಿಪಿಸಿಎಲ್‌ನ ತೈಲ ಸಂಸ್ಕರಣಾಗಾರಗಳು ವಹಿವಾಟು ನಡೆಸಲು ಸೂಕ್ತವಲ್ಲದ ಸ್ಥಳಗಳಲ್ಲಿವೆ. ಇದಲ್ಲದೆ, ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಇಂಧನ ಮಾರುಕಟ್ಟೆಯನ್ನು ಪ್ರವೇಶಿಸಲು ಇಲ್ಲಿನ ಕಾರ್ಮಿಕ ಕಾಯ್ದೆಗಳು ತೊಡಕಾಗಿವೆ ಎನ್ನುವ ಕಾರಣಗಳನ್ನು ನೀಡಿ ಬ್ರಿಟನ್‌ನ ಬಿಪಿ ಪಿಎಲ್‌ಸಿ ಮತ್ತು ಫ್ರಾನ್ಸ್‌ನ ಟೋಟಲ್ ಕಂಪನಿಗಳು ಬಿಡ್‌ನಿಂದ ಹಿಂದೆ ಸರಿದಿವೆ.